ಜೂನ್ 1 ರಿಂದ ಬಿತ್ತು ಗ್ರಾಹಕರ ಜೇಬಿಗೆ ಕತ್ತರಿ.!
1 min readಕೊರೊನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ, ಲಾಕ್ ಡೌನ್ ದೆಸೆಯಿಂದ ಕೊಳ್ಳುವಿಕೆಗೆ ಬ್ರೇಕ್ ಬಿದ್ದಿದೆ. ಆನ್ ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಜೂನ್ 1ರಿಂದ ಪ್ರಮುಖ 7 ಬದಲಾವಣೆಗಳಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳುವ ಸಾಧ್ಯತೆಗಳು ನಿಚ್ಚಳವಾಗಿವೆ.ಪ್ರಮುಖವಾಗಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ತಿಂಗಳ ಮೊದಲ ದಿನ ಪರಿಷ್ಕರಣೆಯಾಗಲಿದೆ. ಆದಾಯ ತೆರಿಗೆ ಕುರಿತಂತೆ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಡಿಜಿಟಲ್ ಸಾಧನಗಳ ಮೇಲಿನ ತೆರಿಗೆ ಹೊರೆ ಇಳಿಕೆ ಬಗ್ಗೆ ಕೂಡಾ ಕಾದು ನೋಡಬಹುದಾಗಿದೆ.
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರವಂತೂ ಏರುತ್ತಿದೆ. ದೇಶದ ಹಲವು ನಗರಗಳಲ್ಲಿ ಪ್ರತಿ ಲೀಟರ್ ಬೆಲೆ 100 ರೂ ಗಡಿ ದಾಟಿಯಾಗಿದೆ. ತಿಂಗಳ ಆರಂಭದಲ್ಲಿ ಜೇಬಿಗೆ ಕತ್ತರಿ ಎಂದರೆ ಜನ ಸಾಮಾನ್ಯರು ಚಿಂತೆಗೀಡಾಗುವುದು ಸಹಜ. ಜೂನ್ 1 ರಿಂದ ವಿಮಾನಯಾನ ದುಬಾರಿಯಾಗಲಿದ್ದು, ಪ್ರಯಾಣದರದಲ್ಲಿ ಶೇ 13 ರಿಂದ 16ರಷ್ಟು ಏರಿಕೆಯಾಗುವ ಸಾಧ್ಯತೆ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಸುಳಿವು ನೀಡಿದೆ.
ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ಸದ್ಯ 14.2 ಕೆ.ಜಿ ಸಿಲಿಂಡರ್ ಬೆಲೆ 809 ರೂ ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.
ಯೂಟ್ಯೂಬ್ ಮೂಲಕ ಸಿಗುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಮೆರಿಕ ಮುಂತಾದೆಡೆಯಿಂದ ವಿಡಿಯೋ ವೀಕ್ಷಣೆ ಮಾಡುವವರಿಂದ ಬಂದ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ.ಗೂಗಲ್ ಸ್ಟೋರೇಜ್ ಮಿತಿ ಗೂಗಲ್ ಡ್ರೈವ್ ತನ್ನ ಸ್ಟೋರೇಜ್ ಮಿತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಜೂನ್ 1 ರಿಂದ ಗೂಗಲ್ ಡ್ರೈವ್ ಸ್ಟೋರೇಜ್ ಮಿತಿ 15 ಜಿಬಿ ಮಾತ್ರ ಸಿಗಲಿದೆ. ಜಿಮೇಲ್ ಹಾಗೂ ಫೋಟೋಸ್ ಎರಡು ಸೇರಿ ಇಷ್ಟು ಮಾತ್ರ ಶೇಖರಣೆ ಮಿತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಸ್ಪೇಸ್ ಬೇಕಾದರೆ ಹಣ ಪಾವತಿಸಬೇಕು.
ಜೂನ್ 1 ರಿಂದ ಚಿನ್ನದ ಮೇಲಿನ ಹಾಲ್ ಮಾರ್ಕ್ ಕಡ್ಡಾಯ ಎಂದು ಕೇಂದ್ರ ಈ ಹಿಂದೆ ಆದೇಶ ನೀಡಿತ್ತು. ಆದರೆ, ನಂತರ ಜೂನ್ 15 ರಂದು ಪ್ರಕಟಣೆ ಹೊರಡಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್‌ಮಾರ್ಕ್ ಕಡ್ಡಾಯವಾಗಲಿದ್ದು, ಪರಿಶುದ್ಧ ಚಿನ್ನ ಪಡೆಯಬಹುದಾಗಿದೆ. ಜೊತೆಗೆ ಚಿನ್ನದ ದರವೂ ಏರಿಕೆಯಾಗಲಿದೆ
ಆದಾಯ ತೆರಿಗೆ ಪಾವತಿಗೆ ಹೊಸ ವೆಬ್ ತಾಣಕ್ಕೆ ಚಾಲನೆ ಜೂನ್ 7ರಂದು ಸಿಗಲಿದೆ. ಐಟಿಆರ್ ವೆಬ್ ತಾಣದ ಬಗ್ಗೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಚೆಕ್ ಪೇಮೆಂಟ್ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಕಂಡು ಬರಲಿದೆ. ಜೂನ್ 1 ರಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ವ್ಯವಹಾರ ಮಾಡುವ ಗ್ರಾಹಕರು ಈ ಬಗ್ಗೆ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ. ಈ ಬಗ್ಗೆ ಬ್ಯಾಂಕ್ ಪರಿಶೀಲಿಸಿದ ನಂತರ ವ್ಯವಹಾರ ಪೂರ್ಣಗೊಳ್ಳಲಿದೆ. ಈ ಮೂಲಕ ಚೆಕ್ ವಂಚನೆ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ.