ಕರ್ನಾಟಕಕ್ಕೆ KSRTC ಇನ್ನಿಲ್ಲ: 7 ವರ್ಷಗಳ ಕಾನೂನು ಸಮರದಲ್ಲಿ ರಾಜ್ಯಕ್ಕೆ ಸೋಲು
1 min readನವದೆಹಲಿ: ಕೆಎಸ್‌ಆರ್‌ಟಿಸಿ ಪದ ಬಳಕೆಗೆ ಸಂಬಂಧಿಸಿದಂತೆ ಕಳೆದ 7 ವರ್ಷಗಳಿಂದನಡೆದ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲಾಗಿದೆ. ಈ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಲೋಗೊ ಕರ್ನಾಟಕದ ಕೈ ತಪ್ಪಿ, ಕೇರಳ ಪಾಲಾಗಿದೆ.
‘ಕೆಎಸ್‌ಆರ್‌ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತು ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ತೀರ್ಪು ನೀಡಿದೆ. ಟ್ರೇಡ್ ಮಾರ್ಕ್ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಆಧಾರದ ಮೇಲೆ ಈ ಕುರಿತು ತೀರ್ಪು ನೀಡಿದೆ. ತೀರ್ಪಿನ ಪ್ರಕಾರ Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ.
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಈಗ “KSRTC” ಎಂಬ ಬ್ರಾಂಡ್ ಹೆಸರಿನ ವಿಶೇಷ ಮಾಲೀಕರಾಗಿದ್ದು, ನೆರೆಯ ರಾಜ್ಯದೊಂದಿಗೆ 7 ವರ್ಷಗಳ ಸುದೀರ್ಘ ಜಗಳವನ್ನು ಕೊನೆಗೊಳಿಸಿದೆ.