September 9, 2024

ರಾಜ್ಯಕ್ಕೆ 29 ನೂತನ ಸಚಿವರು, ವಿಜೇಂದ್ರಗೆ ಇಲ್ಲ ಸ್ಥಾನ- ಮೈಸೂರನ್ನ ಕಡೆಗಣಿಸಿದ ಬಿಜೆಪಿ!

1 min read

ಇಂದು ರಾಜ್ಯ ಬಿಜೆಪಿಯ ಸಂಪುಟ ವಿಸ್ತರಣೆ ಆಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪುತ್ರ ವಿಜಯೇಂದ್ರ ಹೆಸರನ್ನ ಕೈ ಬಿಡಲಾಗಿದೆ. ಈ‌ ಮಾಹಿತಿಯನ್ನ ಖುದ್ದು ಸಿಎಂ ಬೊಮ್ಮಾಯಿ ತಿಳಿಸಿದ್ದು, ಇಂದು 29 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ನೂತನ ಸಚಿವರು ಇವರೇ…

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿಸಿ ಪಾಟೀಲ್ – ಹಿರೇಕೇರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6.ಉಮೇಶ್ ಕತ್ತಿ- ಹುಕ್ಕೇರಿ

7.ಎಸ್.ಟಿ.ಸೋಮಶೇಖರ್- ಯಶವಂತಪುರ

8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

9.ಬೈರತಿ‌ ಬಸವರಾಜ – ಕೆ ಆರ್ ಪುರಂ

10.ಮುರುಗೇಶ್ ನಿರಾಣಿ – ಬಿಳಿಗಿ

11.ಶಿವರಾಂ ಹೆಬ್ಬಾರ್- ಯಲ್ಲಾಪುರ

12.ಶಶಿಕಲಾ ಜೊಲ್ಲೆ- ನಿಪ್ಪಾಣಿ

13.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

14.ಸುನೀಲ್ ಕುಮಾರ್ – ಕಾರ್ಕಳ

15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

16.ಗೋವಿಂದ ಕಾರಜೋಳ-ಮುಧೋಳ

17.ಮುನಿರತ್ನ- ಆರ್ ಆರ್ ನಗರ

18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21.ಹಾಲಪ್ಪ ಆಚಾರ್ – ಯಲ್ಬುರ್ಗ

22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

24.ಪ್ರಭು ಚೌವ್ಹಾಣ್ – ಔರಾದ್

25.ವಿ ಸೋಮಣ್ಣ – ಗೋವಿಂದ್ ರಾಜನಗರ

26.ಎಸ್ ಅಂಗಾರ-ಸುಳ್ಯ

27.ಆನಂದ್ ಸಿಂಗ್ – ಹೊಸಪೇಟೆ

28.ಸಿ ಸಿ‌ ಪಾಟೀಲ್ – ನರಗುಂದ

29.ಬಿಸಿ ನಾಗೇಶ್ – ತಿಪಟೂರು-

ಯಾವ ಯಾವ ಜಾತಿಗೆ ಪ್ರಾಧಾನ್ಯತೆ

8 ಲಿಂಗಾಯಿತ
7 ಒಕ್ಕಲಿಗ
7 OBC
3 SC
1 ST
1 ರೆಡ್ಡಿ
1 ಮಹಿಳಾ
1 ಬ್ರಾಹ್ಮಣ.

13 ಜಿಲ್ಲೆಗೆ ಸಿಗದ ಮಂತ್ರಿಗಿರಿ

13 ಜಿಲ್ಲೆಗಳಿಗೆ ಸಚಿವಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ.

ಮೈಸೂರು
ಕಲಬುರಗಿ
ರಾಮನಗರ
ಕೊಡಗು
ರಾಯಚೂರು
ಹಾಸನ
ವಿಜಯಪುರ
ಬಳ್ಳಾರಿ
ದಾವಣಗೆರೆ
ಕೋಲಾರ
ಯಾದಗಿರಿ
ಚಿಕ್ಕಮಗಳೂರು.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇವೇಳೆ ಹಲವರು ಸಾಥ್ ನೀಡಿದ್ದರು. ಇದಾದ ಬಳಿಕ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲರಾದ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧನೆ ಮಾಡಿದರು.

About Author

Leave a Reply

Your email address will not be published. Required fields are marked *