ಕೋವಿಡ್ ಸಮಸ್ಯೆ ಆಲಿಸಲು ಮನೆ ಮನೆ ಪಾದಯಾತ್ರೆ ಕೈಗೊಂಡ ಎಂಕೆ ಸೋಮಶೇಖರ್
1 min readಕೋವಿಡ್ ಹಿನ್ನಲೆಯಲ್ಲಿ ಮಾಜಿ ಶಾಸಕ ಎಂಕೆ ಸೋಮಶೇಖರ್, ಕ್ಷೇತ್ರದಲ್ಲಿ ಮನೆ ಮನೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೆ.ಆರ್ ಕ್ಷೇತ್ರದ ಜೆ.ಪಿ.ನಗರದ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕೋವಿಡ್ ಸಂಬಂಧಿತ ಸಮಸ್ಯೆ ಆಲಿಸಿದರು.
- ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಹಿಂಭಾಗದ ಜೆ.ಪಿ.ನಗರ “ಸಿ” ಬ್ಲಾಕ್ ಬಡಾವಣೆಯಲ್ಲಿ ಮನೆ ಮನೆ ಪಾದಯಾತ್ರೆ ಕೈಗೊಂಡು ಕೋವಿಡ್ ಲಸಿಕಾ ಜಾಗೃತಿ ಮೂಡಿಸಿದರು. ಇದೇವೇಳೆ ಕೋವಿಡ್ ಸಂಬಂಧ ಕುಂದು ಕೊರತೆಗಳನ್ನು ಆಲಿಸಿದ ಅವರು ಸಮಸ್ಯೆ ಇದ್ದರೆ ಕೂಡಲೇ ತಿಳಿಸುವಂತೆ ಮಾಹಿತಿ ನೀಡಿದರು.
-ಈ ವೇಳೆ ದೇವರಾಜ ಬ್ಲಾಕ್ ಉಪಾಧ್ಯಕ್ಷರಾದ ರಂಜನ್, ವಾರ್ಡ್ ಅಧ್ಯಕ್ಷ ಶೇಖರ್, ವಕೀಲರಾದ ಕಿರಣ್, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ಪುನೀತ್ ಮಾರುತಿ, ಮಹೇಂದ್ರ, ಚೇತನ್ ಸೇರಿ ಮಂಜುನಾಥ್, ರಕ್ಷಿತ್ ಹಾಜರಿದ್ದರು.