ಮೈಸೂರಿನ ಪ್ರವಾಸಿ ತಾಣಗಳಿಗೆ ಕಡಿವಾಣ ಹಾಕೋದು ನಾಳೆ ನಿರ್ಧಾರ ಆಗಲಿದೆ!
1 min readಮೂರನೇ ಅಲೆಯ ಆತಂಕ ಶುರುವಾಗಿದ್ದು ಮೈಸೂರಿನ ಪ್ರವಾಸಿ ತಾಣಗಳು ತೆರದಿರಬೇಕೋ ಅಥವಾ ಮುಚ್ಚಬೇಕೋ ಎಂಬ ತೀರ್ಮಾನ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಢಳಿತಕ್ಕೆ ಸೂಚಿಸಿದ್ದೇನೆಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಹಿರಿಯ ಸಂಸದ ಶ್ರೀನಿವಾಸ ಪ್ರಸಾದ್‌ರ ಮನೆಗೆ ಭೇಟಿ ಕೊಟ್ಟ ಎಸ್ ಟಿ ಸೋಮಶೇಖರ್ ಈ ವೇಳೆ ಮಾಹಿತಿ ನೀಡಿದ್ದಾರೆ.
ನಾಳೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಜನರಿಗು ತೊಂದರೆ ಆಗದಂತೆ ವ್ಯಾಪಾರಸ್ಥರಿಗು ಅನಾನುಕೂಲ ಆಗದಂತೆ ತೀರ್ಮಾನ ಆಗಲಿದ್ದು, ಈಗಾಗಲೇ ಜನರಿಗೆ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ ಆಗಿವೆ. ಹೀಗಾಗಿ ಏಕಾಏಕಿ ಸಂಪೂರ್ಣ ಮುಚ್ಚುವುದು ಸಹ ಕಷ್ಟ. ಇದೆಲ್ಲ ನಾಳೆ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ರು.
ಜಮೀರ್‌ಗೆ ಡಿಕೆಶಿಯೇ ಐಟಿ ಇಡಿ ದಾಳಿ ಮಾಡಿಸರಬಹುದು
ಜಮೀರ್ ಅಹ್ಮದ್ ಪದೇ ಪದೇ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿಕೆ ಶಿವಕುಮಾರ್‌ಗೆ ಅಜಿರ್ಣವಾಗಿರಬೇಕು. ಹಾಗಾಗಿ ಡಿಕೆ ಶಿವಕುಮಾರ್ ಗೆ ಇಡಿ ಐಟಿಯ ಲಿಂಕ್ ಜಾಸ್ತಿ ಬೆಳೆದಿದ್ದು, ಅವರೇ ಯಾಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು ಡಿಕೆಶಿ ಬಿಜೆಪಿ ಪ್ರೇರಿತ ದಾಳಿ ಎಂಬುದಕ್ಕೆ ಟಾಂಗ್ ನೀಡಿದ್ದಾರೆ. ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ನವರು ಹೇಳಿದರೆ. ನಾವು ಡಿಕೆ ಶಿವಕುಮಾರ್ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಐಟಿ ಮತ್ತು ಇಡಿ ಅವರ ಕೆಲಸ ಅವರು ಮಾಡುತ್ತಾರೆ. ವ್ಯವಹಾರಗಳು ಸರಿಯಿದ್ದಾಗ ಯಾರು ಅದಕ್ಕೆ ಹೆದರುವ ಅಗತ್ಯ ಇಲ್ಲ. ಐಟಿ ಇಡಿ ಕೇಳುವ ದಾಖಲೆ ಕೊಟ್ಟರೆ ಮುಗಿತು. ಇದನ್ನ ನೋಡಿದರೆ ಏನೋ ವ್ಯವಹಾರ ಸರಿಯಿಲ್ಲ ಎನಿಸುತ್ತಿದೆ ಎಂದು ಹೇಳಿಕೆ ನೀಡಿದ್ರು.
ಬೆಂಗಳೂರು ಉಸ್ತುವಾರಿ ನೀಡಿ
ಇನ್ನು ಇದೇವೇಳೆ ಮಾತು ಮುಂದುವರೆಸಿದ ಸೋಮಶೇಖರ್, ಬೆಂಗಳೂರು ಉಸ್ತುವಾರಿ ಆಸೆ ಬಿಚ್ಚಿಟ್ಟಿದ್ದಾರೆ. ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ, ಬೆಂಗಳೂರು ಉಸ್ತುವಾರಿ ಬೇಕು. ಸ್ಥಳೀಯ ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಈ ಖಾತೆ ನನಗೆ ಅಗತ್ಯ ಇದೆ. ಸಿಎಂ ನಿನಗೆ ಯಾವ ಖಾತೆ ಬೇಕು ಎಂದು ನನಗೆ ಕೇಳಿದರೆ. ನಾನು ಬೆಂಗಳೂರು ಖಾತೆ ಬೇಕು ಎಂದು ಹೇಳುತ್ತೇನೆ. ಅವರು ಕೇಳುವುದಿಲ್ಲ, ನಾನು ಹೇಳುವುದಿಲ್ಲ ಎಂದು ಗೊತ್ತಿದೆ. ನೀವು ಕೇಳುತ್ತಿದ್ದಿರಿ, ನಾನು ಹೇಳುತ್ತಿದ್ದೇನೆ ಅಷ್ಟೇ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.