ಅರಮನೆಯಲ್ಲಿ ಮಾವುತ, ಕಾವಾಡಿಗಳಿಗಾಗಿ ಮನೆ ರೆಡಿಯಾಯ್ತು!
1 min readಮೈಸೂರು : ವಿಶ್ವವಿಖ್ಯಾತ ಮೈಸೂರು ದಸರೆಯ ಮೊದಲ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಗಜಪಯಣ ಸರಳವಾದರು ಸಂಭ್ರಮದಿಂದ ನೆರವೇರಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ಗಣ್ಯರಿಂದ ಚಾಲನೆ ಸಿಕ್ಕಿದೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಯ ತಂಡ ಇದೀಗಾ ಮೈಸೂರಿನ ಅರಣ್ಯ ಭವನದಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದೆ. ವಿಶೇಷ ಕಾಳಜಿ ಹಾಗೂ ಗಜಪಡೆಗೆ ಆರೈಕೆ ಕೂಡ ನಡೆಯುತ್ತಿದೆ.
ಇದರ ನಡುವೆಯೇ ಗಜಪಡೆಯ ಮಾವುತ ಕಾವಾಡಿ ಕುಟುಂಬಕ್ಕೆ ಅರಮನೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ನಾಳೆ ಬಹುತೇಕ ಎಲ್ಲ ಮನೆಗಳು ಕಂಪ್ಲೀಟ್ ಆಗಿದೆ.
ಹೌದು, ಬಹುತೇಕ ಶೆಡ್ ಮನೆಗಳನ್ನ ಅರಮನೆಯ ಅಂಗಳದಲ್ಲಿ ಮಾವುತ ಕಾವಾಡಿಗಳಿಗಾಗಿ ಸಿದ್ದತೆ ಮಾಡುತ್ತಿದ್ದು ಇಂದು ಶೆಡ್ ಮನೆಗಳು ಪೂರ್ಣಗೊಳ್ಳಲಿದೆ. ಇತ್ತ ನಾಳಿದ್ದು ದಸರಾ ಗಜಪಡೆಗೆ ಸ್ವಾಗತ ಕಾರ್ಯಕ್ರಮ ಇದ್ದು, ಅಂದೇ ಮಾವುತ ಕಾವಾಡಿಗಳ ಕುಟುಂಬ ಅರಮನೆಗೆ ಎಂಟ್ರಿ ಕೊಟ್ಟು ಈ ಮನೆಗಳ ಪ್ರವೇಶ ಆಗಲಿದೆ. ಪ್ರತಿ ವರ್ಷದಂತೆ ಈ ವರ್ಷವು ಈ ಸಿದ್ದತೆ ನಡೆದಿದ್ದು ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ.