ವೈದ್ಯ ಲೀಲಾ ಮೋಹನ್ ಈಗ ಹೀರೋ: ‘ನಾಯಿ ಇದೆ ಎಚ್ಚರಿಕೆ’ ಅಂತಿದ್ದಾರೆ ಡಾಕ್ಟರ್

1 min read

ಸಿನಿಮಾ: ಬಣ್ಣದ ಲೋಕಕ್ಕೆ ಎಂಟ್ರ ಕೊಡಬೇಕು ಎಂದರೆ ಇದನ್ನೆ ಓದಿರಬೇಕು, ಇದೇ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರಬೇಕು ಎನ್ನುವ ಯಾವುದೇ ನಿಯಮವಿಲ್ಲ. ಚಿತ್ರರಂಗಕ್ಕೆ ಯಾರು ಬೇಕಾದರೂ ಎಂಟ್ರಿ ಕೊಡಬಹುದು. ಆದರೆ ಇಲ್ಲಿ ಸಕ್ಸಸ್ ಕಾಣುವವರ ಸಂಖ್ಯೆ ತುಂಬಾ ಕಡಿಮೆ. ಸಾಕಷ್ಟು ವರ್ಷಗಳು ಶ್ರಮಿಸಿ ಕಷ್ಟ ಪಟ್ಟು ಬೆವರಿಳಿಸಿದರೂ ಬೆರಳೆಣಿಕೆಯ ಮಂದಿಗೆ ಮಾತ್ರ ಕಲಾಸರಸ್ವತಿ ಒಲಿಯುತ್ತಾಳೆ. ಹೀಗಿದ್ದರೂ ಸಿನಿಮಾರಂಗಕ್ಕೆಎಂಟ್ರಿ ಕೊಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸಾಕಷ್ಟು ಮಂದಿ ದೊಡ್ಡ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಾಲಿಗೀಗ ಖ್ಯಾತ ವೈದ್ಯ ಡಾ.ಲೀಲಾಮೋಹನ್ ಕೂಡ ಸೇರ್ಪಡೆಯಾಗಿದ್ದಾರೆ.

ಹೌದು, ಖ್ಯಾತ ವೈದ್ಯ ಡಾ. ಲೀಲಾ ಮೋಹನ್ ದೊಡ್ಡ ಹೀರೋ ಆಗಬೇಕು ಎನ್ನುವ ಕನಸುಹೊತ್ತು ಬಣ್ಣದ ಲೋಕದ ಕಡೆ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಲೀಲಾ ಮೋಹನ್ ಇದೀಗ ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಫಿಸಿಶಿಯನ್ ಹಾಗೂ ಡಯಾಬಿಟಿಕ್ಸ್ ಸ್ಪೆಷಲಿಸ್ಟ್ ಆಗಿರುವ ಡಾ. ಲೀಲಾ ಮೋಹನ್ ಬಳಿ ಸದ್ಯ ಅನೇಕ ಸಿನಿಮಾಗಳಿವೆ. ನಟನೆ, ನಿರ್ಮಾಣ ಜೊತೆಗೆ ಡಾಕ್ಟರ್ ವಿತರಣೆಯನ್ನು ಮಾಡಿಸೈ ಎನಿಸಿಕೊಂಡಿದ್ದಾರೆ.

18 ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಕ್ಸಸ್‌ಫುಲ್ ವೈದ್ಯರಾಗಿರುವ ಡಾ. ಲೀಲಾ ಮೋಹನ್ ಸದ್ಯ ಚಿತ್ರರಂಗದಲ್ಲಿ ಯಶಸ್ಸು ಕಾಣಲು ಶ್ರಿಮಿಸುತ್ತಿದ್ದಾರೆ. ಸಿನಿಮಾದಲ್ಲಿ ಮಿಂಚಬೇಕು, ತೆರೆಮೇಲೆ ಅಬ್ಬರಿಸಬೇಕು, ಹೀರೋ ಆಗಬೇಕು ಎನ್ನುವುದು ಲೀಲಾ ಮೋಹನ್ ಅವರಿಗೆ ಅನೇಕ ವರ್ಷಗಳಿಂದ ಇದ್ದ ಕನಸು. ವೈದ್ಯಕೀಯ ಮೃತ್ತಿ ಆಯ್ಕೆ ಮಾಡಿಕೊಂಡಿದ್ದರೂ ನಟನೆ ಕನಸು ಮಾತ್ರ ಹಾಗೆ ಉಳಿದಿತ್ತು. ಆ ಕನಸಿಗೆ ಜೀವ ತುಂಬಿದ್ದು ‘ಬದುಕು’ ಧಾರಾವಾಹಿ. ಕಿರುತೆರೆ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಲೀಲಾ ಮೋಹನ್ ಅವರು ಬದುಕು ಎನ್ನುವ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದರು. ನಂತರ ತನ್ನದೇ ಯೂಟ್ಯೂಬ್ ಚಾನೆಲ್ ಮಾಡಿ ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ರಿಲೀಸ್ ಮಾಡಿದರು. ಬಳಿಕ ‘ಕ್ರೌರ್ಯ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಕನ್ನಡ ಮಾತ್ರವಲ್ಲದೆ ತೆಲುಗಿನ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಗಡಿಯಾರ, ಪುಟಾಣಿ ಪಂಟ್ರು, ರ್ಯಾವನ್, ಉಗ್ರಾವಾತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಉಗ್ರಾವತಾರ ಸಿನಿಮಾದಲ್ಲಿ ಸೈಕೋ ಸುದರ್ಶನ ಎನ್ನುವ ಪಾತ್ರದ ಮೂಲಕ ಲೀಲಾ ಮೋಹನ್ ಖ್ಯಾತಿಗಳಿಸಿದ್ದಾರೆ.

ನಟನಾಗಿ ಎಂಟ್ರಿ ಕೊಟ್ಟ ಲೀಲಾ ಮೋಹನ್ ಬಳಿಕ ನಿರ್ಮಾಣ ಹಾಗೂ ವಿತರಣೆಯಲ್ಲೂ ತೊಡಗಿಸಿಕೊಂಡರು. ಪ್ರಿಯಾಮಣಿ ನಟನೆಯ ‘ಅಂಗುಲಿಕಾ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಮೂಲಕ ವಿತರಕರಾಗಿಯೂ ಬಡ್ತಿ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲೇ ಸಿನಿಮಾರಂಗದ ಬಹುತೇಕ ಕ್ಷೇತ್ರದಲ್ಲಿ ಅನುಭವ ಹೊಂದಿರುವಾ. ಲೀಲಾ ಮೋಹನ್ ಇದೀಗ ದೊಡ್ಡ ಹೀರೋ ಆಗಿ ಬೆಳೆಯಬೇಕು ಎನ್ನುವ ಆಸೆ ಹೊಂದಿದ್ದಾರೆ. ನಟನೆ ಜೊತೆಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು, ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಮಾಹದಾಸೆಯನ್ನು ಹೊಂದಿದ್ದಾರೆ.

About Author

Leave a Reply

Your email address will not be published. Required fields are marked *