ನಾಡಹಬ್ಬ ದಸರಾ ಆಚರಣೆಗೆ 6 ಉಪ ಸಮಿತಿ ರಚಿಸಿದ ಡಿಸಿ!
1 min read
ವಿಶ್ವವಿಖ್ಯಾತ ಮೈಸೂರು ದಸರಾ ಸರಳವಾಗಿ ಆಚರಣೆ ಆಗ್ತಿದ್ದು ಇದೀಗಾ ಸರಳ ದಸರಾ ಆಚರಣೆಗೂ ಉಪ ಸಮಿತಿ ರಚನೆಯಾಗಿದೆ. ಈ ಸಂಬಂಧ ಅಧಿಕೃತ ಜ್ಞಾಪನ ಪತ್ರ ಹೊರಡಿಸಿರುವ ದಸರಾ ಕಾರ್ಯಕಾರಿ ಸಮಿತಿ, ಸಭೆಯ ತೀರ್ಮಾನದಂತೆ 6 ಉಪ ಸಮಿತಿಗಳನ್ನ ರಚಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಯಾವ್ಯಾವ ಸಮಿತಿ ಇದೆ

1.ಸ್ವಾಗತ ಮತ್ತು ಆಮಂತ್ರಣ ಸಮಿತಿ.
2.ದೀಪಾಲಂಕಾರ ಸಮಿತಿ.

- 3.ಮೆರವಣಿಗೆ ಸಮಿತಿ.
4.ಸಾಂಸ್ಕೃತಿಕ ದಸರಾ ಸಮಿತಿ.
5.ಸ್ವಚ್ಚತೆ ಮತ್ತು ವ್ಯವಸ್ಥೆ ಸಮಿತಿ.6.ಸ್ತಬ್ಧಚಿತ್ರ ಸಮಿತಿ.
ಈ ಆರು ಸಮಿತಿಯನ್ನ ರಚನೆ ಮಾಡಿ ಆದೇಶ ಡಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಸಮಿತಿಗಳಿಗೆ ಉಪ ವಿಶೇಷಾಧಿಕಾರಿ ಕಾರ್ಯಾಧ್ಯಕ್ಷರು ಹಾಗೂ ಕಾರ್ಯರ್ಶಿಯ ನೇಮಕವನ್ನು ಕೂಡ ವಿವಿಧ ಇಲಾಖೆಯ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಉಪ ಸಮಿತಿಗಳಿಗೆ ಕಾರ್ಯಗಳ ನಿಯೋಜನೆ ಮಾಡಿದ್ದು, ಎಲ್ಲಾ ಉಪ ಸಮಿತಿಗಳು ದಸರಾ ಉನ್ನತ ಮಟ್ಟದ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ತೀರ್ಮಾನಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕಿದೆ.

ಉಪ ಸಮಿತಿಗಳು ಬಿಡುಗಡೆ ಮಾಡಿದ ದಸರಾ ಅನುದಾನವನ್ನು ನಿಯಮಾನುಸಾರ ಪಾರದರ್ಶಕತೆಯಿಂದ ವೆಚ್ಚ ಮಾಡಬೇಕಾಗಿದೆ. ಉಪ ಸಮಿತಿಯ ಎಲ್ಲಾ ಸದಸ್ಯರು ತಮಗೆ ವಹಿಸಿದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ನಿರ್ವಹಿಸಿ, ಉಪ ಸಮಿತಿಗಳು ಎಲ್ಲಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸುವುದು ಎಂದು ಸೂಚನೆ ನೀಡಲಾಗಿದೆ.

ಇನ್ನು ದಸರಾ ಕಾರ್ಯಕ್ರಮದಲ್ಲಿ ವೆಚ್ಚ ಮಾಡಿದ ಅನುದಾನಕ್ಕೆ ಅಡಿಟ್ ಮಾಡಿಸಿ ಓಚರ್ ಮತ್ತು ಉಪಯುಕ್ತ ಪತ್ರ ಸಮೇತ ಸಲ್ಲಿಸಬೇಕಿದ್ದು, ಕಾರ್ಯಕ್ರಮಗಳನ್ನು ನಿರ್ವಹಿಸುವಾಗ ಸರ್ಕಾರದ ನಿಯಮಾನುಸಾರ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.