ದುಪ್ಪಟ್ಟು ಕರ ವಿಧಿಸಿ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ ನೀಡಲು ಮುಂದಾದ ಮುಡಾ

1 min read

ಮೈಸೂರು,ಸೆ.15-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರ’ವನ್ನು (Occupancy Certificate) ನ್ನು ದುಪ್ಪಟ್ಟು ಕರ ವಿಧಿಸಿ ನೀಡಲು ನಿರ್ಣಯಿಸಿದೆ.

ಈ ಬಗ್ಗೆ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ವಸತಿ ಕಟ್ಟಡ ನಕ್ಷೆ ಅನುಮೋದನೆಯಂತೆ ಕಟ್ಟಡ ನಿರ್ಮಿಸದೇ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ನಿರ್ಮಿಸಿರುವ ಕಾರಣಗಳಿಂದ ಸಾಕಷ್ಟು ವರ್ಷಗಳಿಂದ ಕಟ್ಟಡ ಪೂರ್ಣಗೊಂಡ ವರದಿ ಪಡೆಯಲಾಗದೇ, ಪ್ರಾಧಿಕಾರದ ಕಚೇರಿಗೆ ಮೇಲಿಂದ ಮೇಲೆ ಸಾರ್ವಜನಿಕರು ಅಲೆದಾಡುತ್ತಿರುವುದನ್ನು ಹಾಗೂ ಇದಕ್ಕೆ ಸೂಕ್ತ ಪರಿಹಾರ ಮಾರ್ಗವಿಲ್ಲದೇ ದಾಖಲಾತಿಗಳನ್ನು ಪೂರ್ಣಗೊಳಿಸಲಾಗದೇ ಕಷ್ಟ ಅನುಭವಿಸುತ್ತಿರುವುದನ್ನು ಪ್ರಾಧಿಕಾರ ಮನಗಂಡಿದೆ.

ಮುಡಾದಿಂದ ಪ್ರಕಟಣೆ

ಹೀಗಾಗಿ ಕಟ್ಟಡ ನಿರ್ಮಿಸುವ ಸಮಯದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ಪೂರ್ಣಗೊಳಿಸಿರುವ ಹಾಗೂ ಹಲವಾರು ವರ್ಷಗಳಿಂದ ದಾಖಲೆ ಪೂರ್ಣಗೊಳಿಸಲು ಕಾಯುತ್ತಿರುವ ಸಾರ್ವಜನಿಕರಿಗೆ ದಾಖಲೆ ನೀಡುವ ನಿಟ್ಟಿನಲ್ಲಿ ಪ್ರಾಧಿಕಾರವು ಶಾಶ್ವತ ಪರಿಹಾರದ ನಿರ್ಣಯ ಕೈಗೊಂಡಿದ್ದು, ಅಂತಹ ಕಟ್ಟಡಗಳಿಗೆ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರವನ್ನು ದುಪ್ಪಟ್ಟು ಕರ ವಿಧಿಸಿ ನೀಡಲು ನಿರ್ಣಯಿಸಿದೆ.

ಅದರಂತೆ ನಕ್ಷೆಯಂತೆ ಕಟ್ಟಡ ನಿರ್ಮಿಸದೇ ಸಣ್ಣಪುಟ್ಟ ಬದಲಾವಣೆ ಮಾಡಿ ಕಟ್ಟಡ ನಿರ್ಮಿಸಿರುವ ಕಟ್ಟಡಗಳಿಗೆ ಕಟ್ಟಡ ಪೂರ್ಣಗೊಂಡ ವರದಿ ಪಡೆಯಲಾಗದೇ ಅತಂತ್ರ ಸ್ಥಿತಿಯಲ್ಲಿರುವ ಸಾರ್ವಜನಿಕರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಕಟ್ಟಡ ವಾಸ ಯೋಗ್ಯ ದೃಢೀಕರಣ ಪತ್ರವನ್ನು ಪಡೆದು ದಾಖಲಾತಿಗಳನ್ನು ಪೂರ್ಣಗೊಳಿಸಿಕೊಳ್ಳಲು ಪ್ರಕಟಣೆ ಮೂಲಕ ತಿಳಿಸಿದೆ.

About Author

Leave a Reply

Your email address will not be published. Required fields are marked *