ಮೈಸೂರಿನಲ್ಲಿ ಪಾಸಿಟಿವ್ ಆದ ಮನೆಗೆ ಬಿಳಿ ಬಾವುಟ
1 min readಮೈಸೂರು: ಮೈಸೂರಿನಲ್ಲಿ ಸಾಮಾಜಿಕವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ವಿನೂತನ ಪ್ರಯತ್ನ ನಡೆಯುತಿದ್ದು ಮೈಸೂರಿನಲ್ಲಿ ಪಾಸಿಟಿವ್ ಆದ ಮನೆಗೆ ಬಿಳಿ ಬಾವುಟ ಹಾಕಲಾಗುತ್ತಿದೆ.
ಹೌದು ಮೈಸೂರಿನ ಕೆ.ಆರ್ ಕ್ಷೇತ್ರದ ಮನೆಗಳಿಗೆ ಕೋವಿಡ್ 19 ಬರಹವಿರುವ ಬಿಳಿ ಬಾವುಟ ಕಟ್ಟಲಾಗುತ್ತಿದೆ. ಮನೆಗೆ ಬಾವುಟ ಕಟ್ಟುವ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಚಾಲನೆ ನಿಡಿದ್ದಾರೆ.
ಒಟ್ಟು 3 ಸಾವಿರ ಕೋವಿಡ್ ಪಾಸಿಟಿವ್ ಇದ್ದಾರೆ. ಅವರ ಮನೆಗಳ ಮುಂದೆ ಪಾಲಿಕೆ ಸಿಬ್ಬಂದಿ ಬಾವುಟ ಕಟ್ಟಿ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಪ್ರತಿ ಮನೆಗೆ ಸ್ಯಾನಿಟೈಸರ್ ಸೋಪು ನಿಂಬೆಹಣ್ಣು ಬೆಟ್ಟದ ನೆಲ್ಲಿಕಾಯಿ ಥರ್ಮಾಮೀಟರ್ ಒಳಗೊಂಡ ಕಿಟ್ ವಿತರಣೆ. ಬಾವುಟ ಹಾಕಿರುವ ಮನೆಗಳಿಗೆ ತರಕಾರಿ ಸೇರಿ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ. ಪ್ರತಿದಿನ ಆಶಾ ಕಾರ್ಯಕರ್ತರ ಮೂಲಕ ಆರೋಗ್ಯ ತಪಾಸಣೆ. ಆ ಮನೆಯಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಪ್ರತ್ಯೇಕವಾಗಿ ಕಸ ಸಂಗ್ರಹದ ವ್ಯವಸ್ಥೆ. ಕೊರೊನಾ ಸೋಂಕು ಹರಡಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಅಂತ ರಾಮದಾಸ್ ಅವರು ತಿಳಿಸಿದ್ದಾರೆ.