ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ವಾಬ್ ಟೆಸ್ಟ್‌ಗೆ ಪರದಾಟ. ನಮ್ಮ ಸ್ವಾಬ್ ಟೆಸ್ಟ್ ಮಾಡಿ ಎಂದು ಕಾಲಿಗೆ ಬಿಳ್ತಿದ್ದಾರೆ ಜನ.
1 min readಮೈಸೂರು: ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ವಾಬ್ ಟೆಸ್ಟ್‌ಗೆ ಜನ ಪರದಾಡುತ್ತಿದ್ದಾರೆ. ಎರಡು ದಿನದಿಂದ ಸ್ವಾಬ್ ಟೆಸ್ಟ್ ಮಾಡದೆ ಜನರು ಹೈರಾಣಾಗಿದ್ದಾರೆ. ನಮ್ಮ ಸ್ವಾಬ್ ಟೆಸ್ಟ್ ಮಾಡಿ ಎಂದು ಜಬ ಕಾಲಿಗೆ ಬಿಳ್ತಿದ್ದಾರೆ.
ಬೆಳಗ್ಗೆ 7 ಗಂಟೆಗೆ ಬಂದು ಕ್ಯೂ ನಲ್ಲಿ ನಿಂತ್ರು ಸ್ವಾಬ್ ಟೆಸ್ಟ್ ಮಾಡ್ತಿಲ್ಲ. ಮಧ್ಯಾಹ್ನ 12.30ರ ವರೆಗು ಸ್ವಾಬ್ ಟೆಸ್ಟ್ ಮಾಡೋ ಸಿಬ್ಬಂದಿಗಳೇ ಇಲ್ಲ. ದಿನೆ ದಿನೆ ಹೆಚ್ಚಾಗುತ್ತಿದೆ ಎಚ್ ಡಿ ಕೋಟೆಯಲ್ಲಿ ಪಾಸಿಟಿವ್ ಕೇಸ್. ಕಳೆದೊಂದು ವಾರದಲ್ಲಿ ಪಾಸಿಟಿವ್ ಪ್ರಕರಣ ಸಾವಿರ ಗಡಿ ದಾಟಿದೆ. ಎಚ್‌ಡಿ.ಕೋಟೆಯ ತಾಲೂಕು ಆಡಳಿತದ ನಿರ್ಲಕ್ಷ್ಯತೆ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸ್ವಾಬ್ ಟೆಸ್ಟ್ ಮಾಡುವಂತೆ ಆಸ್ಪತ್ರೆಯ ಸಿಬ್ಬಂದಿಗಳ ಕಾಲಿಗೆ ಜನರು ಬೀಳುತ್ತಿದ್ದಾರೆ. ನಾವು ಸತ್ತ ಮೇಲೆ ಸ್ವಾಬ್ ಟೆಸ್ಟ್ ಮಾಡಬೇಡಿ. ನಾವು ಬದುಕ್ಕಿದ್ದಾಗಲೇ ಸ್ವಾಬ್ ಟೆಸ್ಟ್ ಮಾಡಿ ಎಂದು ಗೋಳಾಡುತ್ತಿರುವುದನ್ನ ವಿಡಿಯೊದಲ್ಲಿ ಕಾಣಬಹುದಾಗಿದೆ.
ವಿಡಿಯೋ ನೋಡಿ