ಮೈಸೂರಲ್ಲಿ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘನೆ/ 179 ವಾಹನಗಳು ಸೀಜ್!
1 min readಮೈಸೂರಿನಲ್ಲಿ ಕರೋನಾ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದ್ದು ವೀಕೆಂಡ್ ಕರ್ಫ್ಯೂ ಇದ್ದರು ಸಹ ಅನಗತ್ಯವಾಗಿ ಹೊರಗೆ ಬಂದ ಬರೋಬ್ಬರಿ 179 ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 157 ದ್ವಿಚಕ್ರ ವಾಹನ, 13 ಕಾರುಗಳು, 9 ಆಟೋ ರಿಕ್ಷಾ ಸೇರಿ 179 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಇದನ್ನ ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದು, ಹಲವು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಗತ್ಯವಾಗಿ ಹೊರಗೆ ಬರಬೇಡಿ. ಆಗೊಮ್ಮೆ ಹೊರಗೆ ಅಗತ್ಯ ಕೆಲಸ ಇದ್ದರೆ ಸೂಕ್ತ ದಾಖಲೆ ಜೊತೆಯಲ್ಲಿಟ್ಟುಕೊಂಡು ಹೊರಗೆ ಬರುವಂತೆಯು ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.