ಮೈಸೂರು : 22ಲಕ್ಷ ಮೌಲ್ಯದ 121ಕೆಜಿ ಗಾಂಜಾ/15ಕೆಜಿ ಖಾಟ್ ಸುಟ್ಟ ಪೊಲೀಸರು!
1 min readಮೈಸೂರಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಮೈಸೂರು ನಗರ ಪೊಲೀಸ್ ಘಟಕದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗಿತ್ತು.
ವಿಶೇಷ ಅಂದ್ರೆ ಮೈಸೂರು ನಗರ ವ್ಯಾಪ್ತಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ NDPS ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಂಡಿರುವ ಮಾದಕ ದ್ರವ್ಯಗಳ ನಿಯಮಾನುಸಾರ ಡ್ರಗ್ ಡಿಸ್ಪೋಸಲ್ ಕಮಿಟಿ ಮುಖಾಂತರ ನಾಶಪಡಿಸುವ ಸಂಬಂಧ ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು.
ಅದರಂತೆ 62 ಪ್ರಕರಣಗಳಲ್ಲಿ ಬರೋಬ್ಬರಿ 121 ಕೆಜಿ 704 ಗ್ರಾಂ ಗಾಂಜಾ ಮತ್ತು ಒಂದು ಪ್ರಕರಣದ 15 ಕೆಜಿ 870 ಗ್ರಾಂ, ಖಾಟ್ ಸೇರಿ ಒಟ್ಟು ಅಂದಾಜು ಮೌಲ್ಯ 22 ಲಕ್ಷದ 48 ಸಾವಿರದ 960 ರೂಗಳ ಇವುಗಳನ್ನ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರ ಗ್ರಾಮದಲ್ಲಿ ನಂಬರ್ 82ರ ಪ್ಲಾಂಟ್‌ನಲ್ಲಿ ಪರಿಸರ ಮಾಲಿನ್ಯವಾಗದಂತೆ ಮಹಜರ್ ಮುಖಾಂತರ ಯಂತ್ರದಲ್ಲಿ ಹಾಕಿ ಬೆಂಕಿಯಿಂದು ಸುಟ್ಟು ನಾಶಪಡಿಸಲಾಗಿದೆ.
ಈ ವೇಳೆ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಅಶ್ವಥ್ ನಾರಾಯಣ, ಮೊಹಮ್ಮದ್ ಇರ್ಷಾದ್, ಹಾಗೂ ಇತರೆ ಠಾಣಾಧಿಕಾರಿಗಳು ಉಪಸ್ಥಿತರಿದ್ದರು. ಇನ್ನು ಈ ಮಾದಕ ದ್ರವ್ಯದಿಂದ ಸಾರ್ವಜನಿಕರು ದೂರ ಇದ್ದು ಆಗೊಮ್ಮೆ ಇದರ ಜಾಲದ ಬಗ್ಗೆ ಮಾಹಿತಿ ಇದ್ದರೆ 1908, 112, 100 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.