ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ಗಳ ಪರೀಕ್ಷೆ ಬರೆಯಲಾರೆವು: ರಾಜ್ಯದ ವಿದ್ಯಾರ್ಥಿಗಳ ಕೂಗು
1 min read
ಮೈಸೂರು: ಈಗಾಗಲೇ ರಾಜ್ಯದಾತ್ಯಂತ ವಿದ್ಯಾರ್ಥಿ ಹೋರಾಟ ವಿದ್ಯಾರ್ಥಿಗಳ ಬೆಸಸಂಖ್ಯೆಯ ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ನಡೆಯುತ್ತಿದೆ. ಪರೀಕ್ಷೆ ಕುರಿತು ಎಐಡಿಎಸ್ಒ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ 46 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಶೇಕಡ 90ರಷ್ಟು ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್ ನ ಪರೀಕ್ಷೆಗಳನ್ನು ಬರೆಯಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ ಸಮೀಕ್ಷೆಯನ್ನು ಮುಂದುವರೆದಿದೆ.

ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ಗಳ ಪರೀಕ್ಷೆ ಬರೆಯಲಾರೆವು ಎಂಬುದು ರಾಜ್ಯದ ವಿದ್ಯಾರ್ಥಿಗಳ ಕೂಗು. ಮತ್ತು

ಆಫ್ ಲೈನ್ ತರಗತಿಗಳು ಆರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ವ್ಯಾಕ್ಸಿನ್ ನೀಡಿರಿ! ಎಂಬ ಬೇಡಿಕೆ ಯನ್ನಿಟ್ಟುಕೊಂಡು ಹೋರಾಟದ ಮುಂದುವರೆದಿದೆ.
ಹೋರಾಟದ ಮುಂದುವರೆದ ಭಾಗವಾಗಿ ಇಂದು ಮೈಸೂರು ಜಿಲ್ಲೆಯ ಕೃಷ್ಣರಾಜ ಕ್ಷೇತ್ರದ MLA ರಾಮದಾಸ್ ರವರನ್ನು, ನರಸಿಂಹ ರಾಜ ಕ್ಷೇತ್ರ ದ MLA ತನ್ವಿರ್ ಸೇಟ್ ರವರನ್ನು, ಚಾಮರಾಜ ಕ್ಷೇತ್ರದ MLA ನಾಗೇಂದ್ರ ಅವರಿಗೆ AIDSO ವಿದ್ಯಾರ್ಥಿ ಸಂಘಟನೆಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಜನಪ್ರತಿನಿಧಿಗಳಾದ ಇವರುಗಳು ವಿದ್ಯಾರ್ಥಿ ಪರ ನಿಂತು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿದ ನಂತರ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಜೊತೆ ಹಾಗೂ ಅಶ್ವಥ್ ನಾರಾಯಣ ಅವರ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.
ಮನವಿ ಪತ್ರಿಕೆ ಸಲ್ಲಿಸುವ ಡೆಲಿಗೇಶನ್ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಬಿ ಜೆ ಉಪಾಧ್ಯಕ್ಷರಾದ ಆಸಿಯ ಬೇಗಂ ಮತ್ತು ಜಿಲ್ಲಾ AIDSO ಜಿಲ್ಲಾ ಸಮಿತಿ ಸದಸ್ಯರುಗಳಾದ ಸಂತೋಷ್, ವಿದ್ಯಾರ್ಥಿಗಳಾದ, ಗಣೇಶ್, ಶ್ರೇಯಸ್, ಅಜಯ್, ದ್ರುವ, ಧನುಷ್ ಮತ್ತಿತರರು ಭಾಗವಹಿಸಿದ್ದರು.