ಮೈಸೂರು ಪಾಲಿಕೆ ಫೈನಲ್‌ ವಾರ್ನಿಂಗ್- ತಪ್ಪಿದ್ರೆ ವಾಟರ್ ಲೈನ್- ಒಳಚರಂಡಿ ಸಂಪರ್ಕ ಕಟ್!

1 min read

ಮೈಸೂರು ಮಹಾನಗರ ಪಾಲಿಕೆಗೆ ಮೈಸೂರಿನ ಸಾರ್ವಜನಿಕರು ನೀರಿನ ತೆರಿಗೆ ಬಾಕಿ ಉಳಿಸಿಕೊಂಡಿರೋದು ಬರೋಬ್ಬರಿ 195 ಕೋಟಿ ಇದ್ದು ಈ ಹಣವನ್ನ ವಸೂಲಿ ಮಾಡೋದಕ್ಕೆ ಮೈಸೂರು ಪಾಲಿಕೆ ಹರಸಾಹಸ ಪಡುತ್ತಿದೆ‌. ಅದಕ್ಕಾಗಿ ಇನ್ಮುಂದೆ ಹೆಚ್ಚಿನ ಸಮಯಾವಕಾಶ ನೀಡಿದೆ, ಆದಷ್ಟು ಬೇಗ ತೆರಿಗೆ ಬಾಕಿ ಪಾವತಿ ಮಾಡದಿದ್ರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅಧಿಕೃತವಾಗಿಯೇ ಜನರಿಗೆ ಮೈಸೂರು ಪಾಲಿಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಪಾಲಿಕೆಯ ಆದೇಶ

ಇದು ಮೈಸೂರು ನಗರದ ಜನತೆಗೆ ದಿನನಿತ್ಯ ಒದಗಿಸಬೇಕಾದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ಪೂರೈಸುವ ಹಿತದೃಷ್ಟಿಯಿಂದ ನೀರಿನ ತೆರಿಗೆ ಬಾಕಿ ವಸೂಲಿ ನಡೆಯುತ್ತಿದ್ದು, ತೆರಿಗೆ ಬಾಕಿ ಉಳಿಸಿ ಕೊಂಡಿರುವವರು ಕೂಡಲೇ ನೀರಿನ ತೆರಿಗೆಯನ್ನು ಪಾವತಿಸಲು ತಿಳಿಸಿದೆ.

ಮೈಸೂರು ಪಾಲಿಕೆ

ತಪ್ಪಿದ್ದಲ್ಲಿ ಅಂತಹ ಗ್ರಾಹಕರಿಗೆ ಕಲ್ಪಿಸಿರುವ ನೀರಿನ ಸಂಪರ್ಕ ಮತ್ತು ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದೆ

About Author

Leave a Reply

Your email address will not be published. Required fields are marked *