ದೇವಾಲಯ ತೆರವು ಕಾರ್ಯಾಚರಣೆ ಖಂಡಿಸಿ ಎಚ್ಚರಿಕೆಯ ಅಭಿಯಾನ
1 min readಮೈಸೂರು,ಸೆ.18- ಮೈಸೂರಿನಲ್ಲಿ ದೇವಾಲಯ ತೆರವು ಕಾರ್ಯಾಚರಣೆಗೆ ಮುಂದಾದ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ
ರಾಷ್ಟ್ರೀಯ ಹಿಂದೂ ಸಮಿತಿಯವರು ಎಚ್ಚರಿಕೆಯ ಅಭಿಯಾನ ನಡೆಸಿದರು.
ನಗರದ ಬನಶಂಕರಿ ದೇವಾಲಯದ ಮುಂದೆ ಅಭಿಯಾನ ನಡೆಸಿ ದೇವಾಲಯ ತೆರವು ಕಾರ್ಯಾಚರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ಅಭಿಯಾನದ ನಂತರ ಇನ್ನು ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಕಲ್ಲನ್ನೂ ಸಹ ಮುಟ್ಟಲು ಬಿಡುವುದಿಲ್ಲ. ಯಾವುದೇ ಪಕ್ಷ ಭೇದವಿಲ್ಲದೆ ಹಿಂದುತ್ವಕ್ಕಾಗಿ ಹೋರಾಡುತ್ತೇವೆ. ಹಿಂದುತ್ವ ಎಂಬುದು ತಾಯಿಗೆ ಸಮ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು. ಈಗ ತಾತ್ಕಾಲಿಕವಾಗಿ ದೇವಾಲಯ ತೆರವು ಮಾಡುವ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಶಾಶ್ವತವಾಗಿ ಈ ಕಾರ್ಯಾಚರಣೆಯನ್ನು ತಡೆಯಬೇಕೆಂದು ಒತ್ತಾಯಿಸಲಾಯಿತು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ಅಧಿಕಾರಿಗಳು ಏಕಾ ಏಕಿ ಹಿಂದೂಗಳ ದೇವಾಲಯವನ್ನು ಧ್ವಂಸ ಮಾಡಿರುವುದು ಖಂಡನೀಯ. ಇದೇ ರೀತಿ ದೇವಾಲಯಗಳನ್ನು ಒಡೆದು ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಅಭಿಯಾನದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ್, ತೇಜಸ್, ಗಗನ್, ವಿನಯ್, ಚೇತು, ಮಲ್ಲೇಶ್, ಮಹೇಶ್, ಪವನ್ ಸೋಮು, ಚಂದನ್, ಮನೋಜ್, ಶಶಾಂಕ್ ಇತರರು ಇದ್ದರು.