ಖಾಸಗಿ ಆಸ್ಪತ್ರೆಗಳಿಂದ ಕೃತಕ ಲಸಿಕಾ ಅಭಾವ ಸೃಷ್ಟಿ ಶಂಕೆ ವ್ಯಕ್ತಪಡಿಸಿದ ಮಾಜಿ ಸಚಿವ
1 min read
ಬೆಂಗಳೂರು: ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಖಾಸಗಿ ಆಸ್ಪತ್ರೆಗಳಿಂದ ಕೃತಕ ಲಸಿಕಾ ಅಭಾವ ಸೃಷ್ಟಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಖಾಸಗೀ ಆಸ್ಪತ್ರೆಗಳಲ್ಲಿ 22.19 ಲಕ್ಷ ಪ್ರಮಾಣದ ಲಸಿಕೆಯ ಸಂಗ್ರಹಣೆ ಇದೆ. ಇನ್ನೊಂದೆಡೆ ಸರ್ಕಾರೀ ವ್ಯವಸ್ಥೆಯಡಿ ಲಸಿಕೆಗಾಗಿ ಎಲ್ಲೆಡೆ ಹಾಹಾಕಾರ ಎದ್ದಿದೆ. ಬಹುಶಃ ಕೃತಕ ಬೇಡಿಕೆಯನ್ನು ಸೃಷ್ಟಿಸುವ ಸಂಶಯ ವ್ಯಕ್ತವಾಗ್ತಿದೆ. ಈ ಮೂಲಕ ಜನ ಸಾಮಾನ್ಯರ ಬಳಿ ಆರೋಗ್ಯ ಅಸ್ತ್ರ ಬಳಸಿ ಹಣವನ್ನು ಸುಲಿಗೆ ಮಾಡುವಂತಹ ತಂತ್ರ ಮಾಡಿದ್ದಾರೆ ಅಂತ ಟ್ವೀಟ್ಟರ್ ನಲ್ಲಿಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪ ಮಾಡಿದ್ದಾರೆ.

ಎಲ್ಲಾ ಮುನ್ಸೂಚನೆ ಇದ್ದರೂ ರಾಜ್ಯ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡಿಲ್ಲ. ಕೂಡಲೇ ಲಸಿಕೆಯನ್ನು ಎಲ್ಲರಿಗೂ ದೊರೆಯುವಂತೆ ಮಾಡಿ. ಬಿಗಿಯಾದ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಅಂತ ಟ್ವೀಟ್ಟರ್ ನಲ್ಲಿ ಹೆಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.