ಮೈಸೂರಿನಲ್ಲಿ ಮತ್ತೊಂದು ಫ್ಲೈಓವರ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
1 min readಮೈಸೂರು: ಮೈಸೂರಿನಲ್ಲಿ ಮತ್ತೊಂದು ಫ್ಲೈಓವರ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ. ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಡಗೂಡಿ ಸ್ಥಳ ಪರಿಶೀಲನೆ ಕಾರ್ಯ ನಡೆದಿದೆ.
ರಾಷ್ಟ್ರೀಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಜಯ್ ಕುಮಾರ್ ರಿಂದ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮೂಡ ಅಧ್ಯಕ್ಷ ರಾಜೀವ್, ಚೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದರು.
ಮೈಸೂರಿ ಮೇಟಗಳ್ಳಿ ಬಳಿಯ ರಿಂಗ್ ರಸ್ತೆ ಬಳಿ ಫೈ ಓವರ್ ನಿರ್ಮಾಣಕ್ಕೆ ಈ ಸ್ಥಳ ಪರಿಶೀಲನೆ ನಡೆದಿದೆ. ಅಂಡರಪಾಸ್ ನಿರ್ಮಾಣ ಮಾಡಬೇಕೆ ಅಥವಾ ಫೈ ಓವರ್ ನಿರ್ಮಾಣ ಮಾಡಬೇಕೆ ಎಂಬುದುರ ಬಗ್ಗೆ ಚರ್ಚೆ ಮಾಡಲಾಯಿತು.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ: ನನಗಿಂತಲು ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ. ಅವರೆಲ್ಲರಿಗು ನಾನು ಶುಭಾಶಯ ತಿಳಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಮೈಸೂರು ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ. ಇದಕ್ಕಿಂತ ನಾನು ಬೇರೆನು ನಿರೀಕ್ಷೆ ಮಾಡಿಲ್ಲ. ನನಗೆ ಇನ್ನು ಕೆಲಸ ಮಾಡೋಕೆ ಸಮಯ ಬೇಕು. ಮೈಸೂರು ಕೊಡಗು ಜನರ ನಿರೀಕ್ಷೆಗಳನ್ನ ಈಡೇರಿಸುವ ಜವಬ್ದಾರಿ ಇದೆ. ಹಾಗಾಗಿ ಈ ಬಗ್ಗೆ ಇನ್ನು ಹೆಚ್ಚಿನನ್ನು ಹೇಳಲ್ಲ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.