ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಬಂಗಾರ ತಂದುಕೊಟ್ಟ ನೀರಜ್ ಚೋಪ್ರಾ! ದೇಶದಾದ್ಯಂತ ಸಂಭ್ರಮಾಚರಣೆ!
1 min read
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಧಕ್ಕಿದ್ದು, ಜಾವಲಿನ್ ಥ್ರೋನಲ್ಲಿ ಭಾರತದ 23 ವರ್ಷದ ನೀರಜ್ ಚೋಪ್ರಾ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಬೇಟೆಯಾಡಿದ್ದಾರೆ. ಎರಡು ಬಾರಿ ಫೌಲ್ ಆದರು ಮೊದಲ, ಎರಡನೇ, ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಉತ್ತಮವಾದ ಆಟ ಪ್ರದರ್ಶಿಸಿದ್ರು. ಇದರಿಂದ ಒಟ್ಟು ಅಂಕಗಳ ಆಧಾರದ ಮೇಲೆ ನೀರಜ್ ಚೋಪ್ರಾಗೆ ಚಿನ್ನದ ಪದಕ ಲಭಿಸಿದೆ.

- 2008ರಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ಅದಾದ ಬಳಿಕ ಕಳೆದ ಎರಡು ಬಾರಿಯ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಕಂಚು ಸಾಧನೆ ಮಾಡಿತ್ತು. ಆದರೆ ಈ ಬಾರಿಯ ಟೋಕಿಯೋ ಒಲಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಬೇಟೆಯಾಡಿದ್ದು ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. ಈಮೂಲಕ 7 ಪದಕ ಸಾಧನೆ ಮಾಡಿದ ಭಾರತ ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚಿನ ಪದಕ ಸಾಧನೆಗೈದಿದೆ.
ಪ್ರಧಾನಿ ಮೋದಿ, ರಾಷ್ಟ್ರಪತಿಗಳಿಂದ ಶುಭಾಶಯ ಸಲ್ಲಿಕೆ

ಇನ್ನು ಭಾರತಕ್ಕೆ ಬಂಗಾರ ತಂದು ಕೊಟ್ಟ ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿಗಳು ಶುಭಾಶಯ ತಿಳಿಸಿದ್ದಾರೆ. ನಿಮ್ಮ ಈ ಸಾಧನೆ ಯುವ ಪೀಳಿಗೆಗೆ ಸ್ಪೂರ್ತಿ ಎಂದಿದ್ದಾರೆ. ಇದರ ಬೆನ್ನಲ್ಲೇ ಹರಿಯಾಣ ಸರ್ಕಾರ ಕೂಡ ನೀರಜ್ ಅವರಿಗೆ 6 ಕೋಟಿ ರೂಗಳ ಪ್ರಶಸ್ತಿ ಘೋಷಣೆ ಮಾಡಿದೆ.