ಕೊರೋನಾಗೆ ಹೆದರಿ ಶಿಕ್ಷಕ ಆತ್ಮಹತ್ಯೆ

1 min read

ಮೈಸೂರು: ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಶಿಕ್ಷಕನೋರ್ವ ಹೆದರಿ ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಕೋಗಿಲೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕೋಗಿಲೂರು ಗ್ರಾಮದ ಕೆ ಎನ್ ಲೋಕೇಶ್(30) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕನಾಗಿದ್ದಾನೆ. ಲೋಕೇಶ್ ಅವರ ಶವ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೇರಳಾಪುರದ ಕಾವೇರಿ ನದಿಯಲ್ಲಿ ಶವವಾಗಿ ದೊರಕಿದ್ದಾರೆ.

ಈತ ಕಳೆದ ಎರಡು ದಿನಗಳ ಹಿಂದೆ ತಲೆ ನೋವು ಕಾಣಿಸಿಕೊಂಡ ಕಾರಣ ಕೆ ಆರ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಲೋಕೇಶ್ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಬಂದ ಕಾರಣ ಮಾನಸೀಕವಾಗಿ ಕುಗ್ಗಿಹೋದ ಲೋಕೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ ಆತನನ್ನ ಎಷ್ಟೆ ಸಮಾಧಾನ ಪಡಿಸಿದ್ರು ಸಮಾಧಾನ ಆಗಿಲ್ಲ.

ಬಳಿಕ ಕೋವಿಡ್ ಜಿಲ್ಲಾ ಆಸ್ಪತ್ರೆಯಂದ ಕರೆ ಮಾಡಿ ಔಷದಿ ಕೊಡುತ್ತವೆ ಹೆದರಬೇಡಿ ಕ್ವಾರಂಟೈನ್ ಆಗಿ ಮನೆಯಲ್ಲೆ ಇರಿ ಅಂತಾ ಕುಟುಂಬಸ್ಥರು ಮನವಿ ಕೂಡ ಮಾಡಿದ್ದರು.

ಆದರೂ ಸಮಧಾನಗೊಳ್ಳದ ಶಿಕ್ಷಕ ಕೆ.ಎಸ್ ಲೊಕೇಶ್ ಅರಕಲಗೂಡು ತಾಲೂಕಿನ ಕೇರಳ ಪುರದ ಮಡದಿ ಮನೆಗೆ ತೆರಳಿದ್ದಾನೆ. ಮನೆ ಮುಂದೆ ಬೈಕ್ ನಿಲ್ಲಿಸಿ ಮೊಬೈಲ್ ಬಿಟ್ಟು ಕಣ್ಮರೆ ಆಗಿದ್ದರು. ಲೋಕೇಶ್ ಅವರನ್ನು ಎಲ್ಲ ಕಡೆ ಹುಡುಕಾಡಿದರು ಎಲ್ಲಿಯು ಪತ್ತೆಯಾಗಿರಲಿಲ್ಲ ಇಂದು ಕೇರಳಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಕಳೆದ ವರ್ಷವಷ್ಟೆ ಲೋಕೇಶ್ ಗೆ ವಿವಾಹವಾಗಿತ್ತು.

ಸ್ಥಳಕ್ಕೆ ಕೊಣನೂರು ಪೊಲೀಸರು ಬೇಟಿ ನೀಡಿ ಪರಿಶೀಲಿಸದರು ಮೃತ ಲೋಕೇಶ್ ಪಿರಿಯಾಪಟ್ಟಣ ತಾಲೂಕಿನ ಹಂಡತವಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಕೆಲ ವರ್ಷ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದರು.

About Author

Leave a Reply

Your email address will not be published. Required fields are marked *