ಖಾತೆ ಸಂಖ್ಯೆ ತಪ್ಪಾಗಿ ಕೂಲಿಕಾರ್ಮಿಕನ ಖಾತೆಗೆ ವರ್ಗಗೊಂಡಿದ್ದ 20 ಸಾವಿರ ಹಣವನ್ನು ಅವನಿಗೆ ಬಿಟ್ಟ ಹೃದಯವಂತ
1 min readಮೈಸೂರು: ಬ್ಯಾಂಕ್ ಖಾತೆಯ ಒಂದೇ ಒಂದು ಸಂಖ್ಯೆ ತಪ್ಪಾಗಿ ಯಾರಿಗೋ ಕಳುಹಿಸಬೇಕಾಗಿದ್ದ ಹಣ ಮತ್ತಿನ್ಯಾರಿಗೋ ವರ್ಗಾವಣೆ ಗೊಂಡಿದೆ. ಕೂಲಿಕಾರ್ಮಿಕನ ಖಾತೆಗೆ ವರ್ಗಗೊಂಡಿದ್ದ 20 ಸಾವಿರ ಹಣವನ್ನು ಮೈಸೂರಿನ ಹೃದಯವಂತರೊಬ್ಬರು ಅವನಿಗೆ ಬಿಟ್ಟುಕೊಟ್ಟಿದ್ದಾರೆ.
ಸಾಮಾನ್ಯವಾಗಿ ಹೀಗೆ ಅನೇಕರಿಗೆ ಕೆಲವುಸಲ ಆಗಿರುತ್ತದೆ ನಿಜ ಆ ರೀತಿ ಆಗಿ ಬ್ಯಾಂಕ್ ಗೆ ಅಲೆದು, ಅಲ್ಲಿನ ಪ್ರೋಸಿಸರ್ ಪ್ರಕಾರ ಏನಿದೆ ಅದೆಲ್ಲಾ ಕೆಲಸ ಮಾಡಿ , ಆ ರೀತಿ ಹಣ ಹೋದ ಬೇರೆ ಅಕೌಂಟ್ ನ ಖಾತಾದಾರರನ್ನು ಭೇಟಿ ಮಾಡಿ ಅವೆರಿಗೆ ಸಮಾಜಾಹಿಷಿ ನೀಡಿ ಆಮೇಲೆ ಆ ಹಣ ವನ್ನ ನಮ್ಮ ಖಾತೆಗೆ ವರ್ಗಹಿಸುವಂತೆ ಮನವಿ ಮಾಡಬೇಕು. ಆದರೆ ಇಲ್ಲಿ ಆ ರೀತಿ ಆಗಿಲ್ಲ ಇಲ್ಲಿ ಆಗಿರುವುದೇ ಬೇರೆ ರೀತಿ.
ಹೌದು ಹರ್ಷವರ್ಧನ್ ಗೌಡ ಅವರು ಏಪ್ರಿಲ್ ೨೧ ರಂದು ಖಾತೆ ಸಂಖ್ಯೆ 1173110010050699 ನಂಬರ್ ಗೆ ೨೦,೦೦೦ ಹಣ ಕಳುಹಿಸ ಬೇಕಾಗಿರುತ್ತದೆ. ಆದರೆ ಅದು ಒಂದು ಸಂಖ್ಯೆ ತಪ್ಪಾಗಿ ಕೃಷ್ಣಗಿರಿಯ ಎಸ್ ವಿ ರಾಚಪ್ಪ ಅವರ ಖಾತೆ ಸಂಖ್ಯೆ
1183110010050699 ನಂಬರ್ ಗೆ ಹಣ ವರ್ಗಾವಣೆ ಗೊಳ್ಳುತ್ತದೆ. ಅವರು ಬ್ಯಾಂಕ್ ನ ಮ್ಯಾನೇಜರ್ ಗೆ ವಿಷಯ ತಿಳಿಸಿ , ಆ ಖಾತೆಯ ಗ್ರಾಹಕ ಎಸ್ ವಿ ರಾಚಪ್ಪ ಅವರ ಕಾಂಟ್ಯಾಕ್ಟ್ ತೆಗೆದುಕೊಂಡು ಅವರಿಗೆ ಕರೆ ಮಾಡಿದಾಗ ಅವರು ಮೂಲತಃ ಶಿವಮೊಗ್ಗದವರಾಗಿದ್ದು ತಮಿಳುನಾಡಿನ ಬಾರ್ಡರ್ ಕೃಷ್ಣಗಿರಿಯಲ್ಲಿ ಕೂಲಿಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಡೆಸುವುದು ಎಂದು ತಿಳಿದು ಬರುತ್ತದೆ.
ಅವರನ್ನು ವಿಚಾರಿಸಿದಾಗ ಅವರಿಗೆ ತಮ್ಮ ಖಾತೆಗೆ ಹಣ ಸಂದಾಯವಾಗಿರುವ ವಿಚಾರವೇ ಗೊತ್ತಾಗಿರುವುದಿಲ್ಲ, ಹರ್ಷಗೌಡರವರು ತಾವೇ ತಮ್ಮ ಸ್ನೇಹಿತನನ್ನು ಅಲ್ಲಿಗೆ ಕಳುಹಿಸುತ್ತಾರೆ, ಕೃಷ್ಣಗಿರಿಗೆ ಹೋಗಿ ಅಲ್ಲಿ ರಾಚಪ್ಪನವರನ್ನು ಭೇಟಿ ಮಾಡಿ ಮಾತನಾಡಿಸುತ್ತಾರೆ ಅವರು ಹಣ ವಾಪಸ್ಸು ನೀವೆ ತೆಗೆದುಕೊಳ್ಳಿ ನಮಗೆ ಸಂದಾಯವಾಗಿರುವ ವಿಚಾರವೇ ಗೊತ್ತಿಲ್ಲ ಎಂದು ಹಣವನ್ನು ಡ್ರಾಮಾಡಿ ಕೊಡುತ್ತಾರೆ.
ಹಣ ವನ್ನು ಪಡೆದ ಅವರು ರಾಚಪ್ಪ ಅವರ ಮನೆಯ ಪರಿಸ್ಥಿತಿ ತೀವ್ರ ಕಷ್ಟದಲ್ಲಿರುವುದನ್ನು ಗಮನಿಸುತ್ತಾರೆ ಆ ವಿಚಾರವನ್ನು ಹರ್ಷವರ್ಧನ್ ಗೌಡ ಅವರಿಗೆ ತಿಳಿಸಿದಾಗ , ಹರ್ಷವರ್ಧನ್ ಅವರು ಖಾತೆ ಸಂಖ್ಯೆ ತಪ್ಪಾಗಿ ಸಂದಾಯವಾದ ಅಷ್ಟು ಹಣವನ್ನು ಅವರಿಗೆ ವಾಪಸ್ಸು ಕೊಡಿ ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಿದಂತಾಗುತ್ತದೆ ಎಂದು ತಿಳಿಸುತ್ತಾರೆ.
ಅವರು ಹೇಳಿದಂತೆ ಹರ್ಷವರ್ಧನ್ ಸ್ನೇಹಿತ ಅಷ್ಟು ಹಣವನ್ನು ಪುನಃ ರಾಚಪ್ಪನವರ ಕೈಯಲ್ಲಿಡುತ್ತಾರೆ , ಹಣ ಪಡೆದ ಅವರು ಹರ್ಷವರ್ಧನ್ ಗೌಡ ಅವರ ಕಾರ್ಯಕ್ಕೆ ಧನ್ಯವಾದ ತಿಳಿಸುತ್ತಾರೆ. ಈ ಕೊರೊನಾ ಸಮಯದಲ್ಲಿ ಬಡಕುಟುಂಬಕ್ಕೆ ಆಸರೆಯಾದ ಹರ್ಷವರ್ಧನ್ ಗೌಡರವರ ಕಾರ್ಯ ನಿಜಕ್ಕೂ ಶ್ಲಾಘನೀಯ..