ನಿರ್ಗತಿಕರ ನೆರವಿಗೆ ನಿಂತ ಮೈಸೂರು ಜಿಲ್ಲಾ ಪೊಲೀಸರು
1 min readಮೈಸೂರು: ಕರೋನಾದಿಂದ ತತ್ತರಿಸಿರೋ ಜನರಿಗೆ ಸಾಕಷ್ಟು ಮಂದಿ ನೆರವು ನೀಡ್ತಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆ ಕೂಡ ಇದೀಗಾ ಈ ಸಾಲಿಗೆ ಜೊತೆಯಾಗಿದ್ದು, ನಿರ್ಗತಿಕರ ನೆರವಿಗೆ ಬಂದಿದೆ. ಅದರಲ್ಲು ಮೈಸೂರಿನಲ್ಲಿ ಛತ್ರದಲ್ಲಿ ಆಶ್ರಯ ಪಡೆದ ಜನರಿಗೆ ಮೈಸೂರು ಜಿಲ್ಲಾ ಪೊಲೀಸರು ನೆರವಿಗೆ ನಿಂತಿದ್ದಾರೆ.
ಹೌದು ಇಂದು ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಇನ್ಸ್ಪೆಕ್ಟರ್ ಜೀವನ್ ಸಬ್ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳು ಆಹಾರ ನೀಡಿ ನೆರವು ನೀಡ್ತಿದ್ದಾರೆ. ನಿತ್ಯವೂ 100ಕ್ಕು ಹೆಚ್ಚು ಮಂದಿಗೆ ಆಹಾರ ನೀಡುತ್ತಿದ್ದು ಇವತ್ತು ಪೊಲೀಸ್ ಇಲಾಖೆಯಿಂದ ಆಹಾರ ನೀಡಲಾಗಿದೆ.