ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ ಶಾಸಕ ಎಸ್.ಎ ರಾಮದಾಸ್
1 min read
ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ನಿರಾಶ್ರಿತರನ್ನ ಗಂಜಿ ಕೇಂದ್ರಕ್ಕೆ ಸೇರಿಸಿದ್ದಾರೆ.
ಮಳೆಯಲ್ಲಿ ಸಿಲುಕಿ ಸೂರಿಲ್ಲದೆ ರಸ್ತೆ ಪಕ್ಕದಲ್ಲಿ, ಅಂಗಡಿ ಮಳಿಗೆಗಳ ಮುಂಭಾಗ ಆಶ್ರಯಪಡೆದಿದ್ದ ನಿರಾಶ್ರಿತರನ್ನ ವಾಹನ ಮೂಲಕ ಆಶ್ರಯ ತಾಣಕ್ಕೆ ರಾಮದಾಸ್ ರವಾನೆ ಮಾಡಿಸಿದ್ದಾರೆ.

ರಾಮದಾಸ್ ಅವರು ಸ್ವತಃ ಸ್ವಯಂಸೇವಕರೊಂದಿಗೆ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿ ಸುಮಾರು 20ಕ್ಕೂ ಹೆಚ್ಚು ನಿರಾಶ್ರಿತರನ್ನು ಸಿದ್ದಾರ್ಥ ನಗರದ ಕಲ್ಯಾಣ ಮಂಟಪಕ್ಕೆ ಕರೆದೋಯ್ದು ಆಶ್ರಯ ನೀಡಿದ್ದಾರೆ.