ದೇವಾಲಯ ತೆರವು ಕಾರ್ಯಚರಣೆ ಸದ್ಯಕ್ಕೆ ಸ್ಥಗಿತ, ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂತಿಮ ಆದೇಶ: ಸಚಿವ ಎಸ್.ಟಿ.ಸೋಮಶೇಖರ್

1 min read

ಮೈಸೂರು,ಸೆ.16-ಮೈಸೂರಿನಲ್ಲಿ ಅನಧಿಕೃತ ದೇವಾಲಯ ತೆರವು ಕಾರ್ಯಚರಣೆ ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡರು ದಿನದಲ್ಲಿ ನಡೆಯುವ ಕ್ಯಾಬಿನೆಟ್ ನಲ್ಲಿ ತೆರವು ಕಾರ್ಯಚರಣೆ ಬಗ್ಗೆ ಚರ್ಚೆ ಮಾಡಿ ಅಂತಿಮ ಆದೇಶ ಮಾಡುತ್ತೇವೆ. ಸದ್ಯಕ್ಕೆ ಯಾವ ದೇವಾಲಯವೂ ತೆರವು ಕಾರ್ಯಚರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹದೇವಮ್ಮ ದೇವಸ್ಥಾನ ತೆರವು ಕಾರ್ಯಚರಣೆ ಹೇಗಾಯ್ತು, ಎಲ್ಲಿ ಲೋಪ ಇದೆ ಅನ್ನೋದನ್ನ ಅಧಿಕಾರಿಗಳ ವಿವರಣೆ ಕೇಳಿದ್ದೇವೆ. ಅಧಿಕಾರಿಗಳ ವಿವರಣೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು. ದೇವಸ್ಥಾನ ತೆರವು ಮಾಡಿದ್ದ ಕಾರಣ ಅವರಿಗೆ ನೋವಾಗಿದೆ. ಅವರ ಪ್ರತಿಭಟನೆ ತಪ್ಪಲ್ಲ. ಇದರಿಂದ ಸರ್ಕಾರಕ್ಕೆ ಯಾವ ಮುಜುಗರವೂ ಇಲ್ಲ ಎಂದರು.

About Author

Leave a Reply

Your email address will not be published. Required fields are marked *