ಡಿಸಿಎಫ್ ದಂಪತಿಗಳಾದ ಕಮಲ ಕರಿಕಾಳನ್-ಕರಿಕಾಳನ್ ಗೆ ದಸರಾ ಜವಾಬ್ದಾರಿ

1 min read

ಮೈಸೂರು,ಸೆ.16-ಮೈಸೂರು ದಸರಾ ಮಹೋತ್ಸವದ ಜವಾಬ್ದಾರಿಯನ್ನು ಮತ್ತೆ ಡಿಸಿಎಫ್ ಗಳಾದ ಕೆ.ಕಮಲ ಕರಿಕಾಳನ್ ಹಾಗೂ ಡಾ.ವಿ.ಕರಿಕಾಳನ್ ಅವರಿಗೆ ವಹಿಸಲಾಗಿದೆ.
ನಾಲ್ಕು ವರ್ಷದಿಂದ ಮೈಸೂರಿನಲ್ಲಿ ದಸರಾ ಮಾಡಿರುವ ಅನುಭವ ಹೊಂದಿರು ಡಿಸಿಎಫ್ ದಂಪತಿಗಳಾದ ಕಮಲ ಕರಿಕಾಳನ್-ಕರಿಕಾಳನ್ ಅವರಿಗೆ ಈ ಬಾರಿ ಮತ್ತೆ ಜವಾಬ್ದಾರಿಯನ್ನು ವಹಿಸಲಾಗಿದೆ.
ಈ ಬಾರಿಯೂ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆ ಬಗ್ಗೆ ಇವರು ವಿಶೇಷ ಕಾಳಜಿ ವಹಿಸಿದ್ದರು. ಈ ಹಿಂದೆ ನೀಡಲಾಗಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಲಾರಿಯಲ್ಲಿ ಬರುತ್ತಿದ್ದ ಗಜಪಡೆಯನ್ನ ಸಾರ್ವಜನಿಕರು ನೋಡಲು ಅನುಕೂಲ ಮಾಡಿಕೊಟ್ಟಿದ್ದರು.
ಕಮಲ ಕರಿಕಾಳನ್ ಅವರು ಈ ಹಿಂದೆ ಮೈಸೂರು ಮೃಗಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಹಕ್ಕಿ ಜ್ವರವನ್ನ ಯಶಸ್ವಿಯಾಗಿ ನಿಭಾಯಿಸಿ ಮೃಗಾಲಯದ ಪ್ರಾಣಿಗಳನ್ನ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

About Author

Leave a Reply

Your email address will not be published. Required fields are marked *