September 9, 2024

SSLC, ದ್ವಿತೀಯ ಪಿಯು ಪರೀಕ್ಷೆ- ರದ್ದತಿಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ: ಎಸ್. ಸುರೇಶ್ ಕುಮಾರ್

1 min read

ಬೆಂಗಳೂರು: ಕೋವಿಡ್ ತೀವ್ರ‌ ಪ್ರಸರಣದ‌ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಎಸ್.ಎಸ್.ಎಲ್.ಸಿ-ದ್ವಿತೀಯ ಪಿಯು‌ ಪರೀಕ್ಷೆಗಳನ್ನು ರದ್ದು ‌ಪಡಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.

ಕೆಲವು ಮಾಧ್ಯಮಗಳ ಸುದ್ದಿ ಊಹಾಪೋಹವಷ್ಟೇ‌ ಎಂದಿರುವ ಸಚಿವರು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಯೋಗಕ್ಷೇಮವನ್ನು ಗಮನದಲ್ಲಿರಿಸಿ ಮುಂದಿನ ದಿನಗಳಲ್ಲಿ ಅವರ ಒಳಿತಿಗೆ ಪೂರಕವಾದ ನಿರ್ಣಯ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ವಿಚಲಿತರಾಗದೇ‌ ವಿದ್ಯಾರ್ಥಿಗಳು‌ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಅವರು ಮನವಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *