ಸೈಮಾ ಇಂಟರ್ ನ್ಯಾಷನಲ್ ಅವಾರ್ಡ್‌ನಲ್ಲಿ ಧೂಳೆಬ್ಬಿಸಿದ ಡಿ ಬಾಸ್ ಯಜಮಾನ!

1 min read

ಡಿ ಬಾಸ್ ನಟನೆಯ ಯಜಮಾನ ಚಿತ್ರ ಇದೀಗಾ ಹೊಸದೊಂದು ದಾಖಲೆ ಬರೆದಿದ್ದು, ಸೈಮಾ ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್‌ನಲ್ಲಿ 8 ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಕನ್ನದ ಚಿತ್ರರಂಗದಲ್ಲಿ ಹೊಸದಾದ ದಾಖಲೆ ನಿರ್ಮಿಸಿದೆ. ನಟ ದರ್ಶನ ಅನುಪಸ್ಥಿತಿಯಲ್ಲೇ ನಿರ್ಮಾಪಕಿ ಶೈಲಜನಾಗ್ ಅವರೇ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡಿದ್ದು ಸೈಮಾಗೆ ಧನ್ಯವಾದ ಹೇಳಿದ್ದಾರೆ.

ಯಾವ್ಯಾವ ವಿಭಾಗದಲ್ಲಿ ಯಜಮಾನ ಚಿತ್ರ ಪ್ರಶಸ್ತಿ ಬಂದಿದೆ…

8 ವಿಭಾಗದಲ್ಲಿ ದರ್ಶನ್ ನಟನೆಯ ಯಜಮಾನ ಚಿತ್ರಕ್ಕೆ ಅವಾರ್ಡ್ ಬಂದಿದೆ.

  1. ಅತ್ಯುತ್ತಮ ನಟನೆ.
  2. ಅತ್ಯುತ್ತಮ ಸಂಗೀತ.
  3. ಅತ್ಯುತ್ತಮ ಚಿತ್ರ.
  4. ಅತ್ಯುತ್ತಮ ಕಾಮಿಡಿ‌ ನಟ.
  5. ಅತ್ಯುತ್ತಮ ನಟಿ.
  6. ಅತ್ಯುತ್ತಮ ಸಪೋರ್ಟಿಂಗ್ ರೋಲ್.
  7. ಅತ್ಯುತ್ತಮ ಹಿನ್ನಲೆ ಗಾಯನ.
  8. ಅತ್ಯುತ್ತಮ ನಿರ್ದೇಶನ.

ಹೀಗೆ ನಾನಾ ವಿಭಾಗಗಳಲ್ಲಿ ಯಜಮಾನ ಚಿತ್ರ ಭರ್ಜರಿಯಾಗಿ ಅವಾರ್ಡ್‌ಗಳನ್ನ ದೋಚಿಕೊಂಡಿದೆ.

ಯಾವ್ಯಾವ ಚಿತ್ರಗಳು ಪೈಪೋಟಿಯಲ್ಲಿತ್ತು.

ಬರೋಬ್ಬರಿ ಐದು ಚಿತ್ರಗಳು ಈ ಬಾರಿ ಸೈಮಾಗೆ ಹೋಗಿದ್ದವು. ಅದರಲ್ಲಿ ಆಯ್ಕೆಯಾಗಿದ್ದು ಮಾತ್ರ ಐದು ಚಿತ್ರಗಳು. ವಿಭಿನ್ನವಾದ ಕಥೆ ಜೊತೆಗೆ ಹೊಸ ಪ್ರಯತ್ನ ಈ ಚಿತ್ರಗಳು ಐದರಲ್ಲು ಇತ್ತು. ಆದರು ಅತೀ ಹೆಚ್ಚು ಜನರಿಗೆ ಹತ್ತಿರವಾಗಿದ್ದು, ಮಾತ್ರ ಡಿ ಬಾಸ್ ಅಭಿನಯದ ಯಜಮಾನ ಚಿತ್ರ. ಕವಲುದಾರಿ, ನಟ ಸಾರ್ವಭೌಮ, ಅವನೇ ಶ್ರೀಮನ್ ನಾರಾಯಣ ಚಿತ್ರಗಳು ಕೂಡ ರೇಸ್‌ನಲ್ಲಿದ್ದವು. ಆದರೆ ಆ ಚಿತ್ರಗಳಿಗು ಕೂಡ ಕೆಲವೊಂದು ವಿಭಾಗದಲ್ಲಿ ಅವಾರ್ಡ್ ಬಂದಿದ್ದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ಪ್ರಶಸ್ತಿ ಲಭಿಸಿದಷ್ಟೇ ಖುಷಿಯಾಗಿದೆ.

About Author

Leave a Reply

Your email address will not be published. Required fields are marked *