ತಮಿಳುನಾಡು ರಾಜ್ಯಪಾಲರಾಗಿ ರವೀಂದ್ರ ನಾರಾಯಣ್ ರವಿ ಪ್ರಮಾಣವಚನ ಸ್ವೀಕಾರ

1 min read

ಚೆನ್ನೈ,ಸೆ.18-ತಮಿಳುನಾಡು ನೂತನ ರಾಜ್ಯಪಾಲರಾಗಿ ರವೀಂದ್ರ ನಾರಾಯಣ್ ರವಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಅವರು ಪ್ರಮಾಣವಚನ ಬೋಧಿಸಿದರು.
ಈ ವೇಳೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಚಿವ ಸಂಪುಟದ ಸದಸ್ಯರು, ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು. ಈ ಬಳಿಕ ಸ್ಟಾಲಿನ್ ಅವರು ರಾಜ್ಯ ವಿಧಾನಸಭೆ ಸ್ಪೀಕರ್ ಎಂ ಅಪ್ಪಾವು ಮತ್ತು ಸಂಪುಟ ಸದಸ್ಯರನ್ನು ಅವರಿಗೆ ಪರಿಚಯಿಸಿದರು.
ಈ ಹಿಂದಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಪಂಜಾಬ್ಗೆ ವರ್ಗಾಯಿಸಲಾಗಿದೆ. ಕಳೆದ ವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರ್.ಎನ್ ರವಿ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನೇಮಿಸಿದರು. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ರವಿ ಅವರು ಈ ಹಿಂದೆ ಕೇಂದ್ರ ಸರ್ಕಾರದ ನಾಗಾ ಶಾಂತಿ ಮಾತುಕತೆಯ ಸಂವಾದಕರಾಗಿ ಕಾರ್ಯನಿರ್ವಹಿಸಿದ್ದರು.

About Author

Leave a Reply

Your email address will not be published. Required fields are marked *