ಪಾರಂಪರಿಕ ಕಟ್ಟಡ ಉಳಿಸಲು ಸಹಿ ಸಂಗ್ರಹ ಅಭಿಯಾನ
1 min readಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಉಳಿಸಲು ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ನಗರದ ಲ್ಯಾನ್ಸ್‌ಡೌನ್ ಕಟ್ಟಡದ ಮುಂಭಾಗ ನಡೆಯುತ್ತಿರುವ ಸಹಿ ಸಂಗ್ರಹಕ್ಕೆ ಇತಿಹಾಸ ತಜ್ಞ ಎನ್.ಎಸ್.ಗಂಗರಾಜು ಜೊತೆಯಾಗಿದ್ದಾರೆ.
ಪ್ರಸಿದ್ಧ ಲ್ಯಾನ್ಸ್‌ಡೌನ್ ಕಟ್ಟಡ ಕೆಡವಲು ಸರ್ಕಾರ ಮುಂದಾಗಿದ್ದು ಈ ಬಗ್ಗೆ ನಗರಾಭಿವೃದ್ಧಿ ಸಚಿವ ಬಸವರಾಜು ಹೇಳಿಕೆ ನೀಡಿದ್ದರು. ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ಕೆಡವಲು ಸೂಚಿಸಿ ಅಲ್ಲಿ ಅದೇ ಮಾದರಿಯಲ್ಲಿ ಕಟ್ಟಡ ಕಟ್ಟುವುದಾಗಿ ಹೇಳಿದ್ದರು. ಇದಕ್ಕೆ ಮೈಸೂರಿಗರಿಂದ ಆಕ್ಷೇಪ ವ್ಯಕ್ತವಾಗಿದೆ. ಕಟ್ಟಡ ಕೆಡವದಂತೆ 10 ದಿನಗಳ ವರೆಗು ಪಾರಂಪರಿಕ ಕಟ್ಟಡಗಳ ಬಳಿ ಸಹಿಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ.
ಯುವಕ ನಿಶಾಂತ್ ನೇತೃತ್ವದಲ್ಲಿ ಈ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನದ ಬಳಿಕ ಸಿಎಂಗೆ ಸಹಿಸಂಗ್ರಹ ರವಾನೆ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಸಹಿ ಸಂಗ್ರಹಕ್ಕೆ ಪಾರಂಪರಿಕ ಕಟ್ಟಡ ಉಳಿಸಿ ಸಮಿತಿ ಸದಸ್ಯರಾಗಿದ್ದ ರಂಗರಾಜು ಅವರು ಜೊತೆಯಾಗಿದ್ದಾರೆ.
ಪಾರಂಪರಿಕ ಕಟ್ಟಡ ಉಳಿಸಿ ಸಮಿತಿ ಯದುವೀರ್ ಒಡೆಯರ್ ಸೂಚಿಸಿದ್ದರು. ಈ ಹಿಂದೆ ಖುದ್ದು ಯದುವೀರ್ ಒಡೆಯರ್ ಕೂಡ ಸ್ಥಳ ಪರಿಶೀಲನೆ ನಡೆಸಿದ್ರು. ಕಟ್ಟಡ ಕೆಡವದಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರು ತಜ್ಞರ ವರದಿ ಲೆಕ್ಕಿಸದೆ ಕಟ್ಟಡ ಕೆಡವಲು ಸರ್ಕಾರ ಮುಂದಾಗಿದೆ.