ಸಂಕಷ್ಟದಲ್ಲಿರುವ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ

1 min read

ಮೈಸೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಜಿಲ್ಲೆ, ಮೈಸೂರು ಇವರ ವತಿಯಿಂದ ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಾಯ್ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್, ಮೈಸೂರು ಕೇಂದ್ರ ಇವರ ಸಹಯೋಗದೊಂದಿಗೆ ಕೋವಿಡ್-19 ರ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ “ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮ”ವನ್ನು ಶಾಸಕರಾದ ಶ್ರೀಯುತ ಎಸ್.ಎ. ರಾಮದಾಸ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನ ಮಾನ್ಯ ಶಾಸಕರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಇಂದು ಕೆ.ಆರ್ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಅವರಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನಿಂತುಹೋಗಿತ್ತು. ಈ ಹಿಂದೆ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 5 ಸಾವಿರ ರೂಪಾಯಿ ಕೊಡಿಸುವ ಕೆಲಸ ಮಾಡಿತ್ತು.ಕೋವಿಡ್ 2ನೆ ಅಲೆಯಲ್ಲೂ ಸಹ 3 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್ ಅನ್ನು ನೀಡುತ್ತಿದ್ದೇವೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್ ವರೆಗೂ ಉಚಿತ ಪಡಿತರವನ್ನ ನೀಡುತ್ತಿದ್ದಾರೆ. ಓರ್ವ ಬಾಲ ಕಟ್ಟಡ ಕಾರ್ಮಿಕ ತನ್ನ ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡು, ತನ್ನ ಕುಟುಂಬವನ್ನು ಸಲಹುವುದಕ್ಕೋಸ್ಕರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಾ ಅಲ್ಲೇ ಸಾಧನೆಯನ್ನು ಮಾಡಿ ನೋಬಲ್ ಪ್ರಶಸ್ತಿಯನ್ನು ತೆಗೆದುಕೊಂಡವರು ಹ್ಯಾಮಲ್ಟನ್ ನಮಗೆಲ್ಲಾ ಸ್ಫೂರ್ತಿ. ಓರ್ವ ಕಟ್ಟಡ ಕಾರ್ಮಿಕ ಕೂಡಾ ತನ್ನ ಸ್ಕಿಲ್ ಗಳ ಮೂಲಕ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಕೂಡ ಹೋಗೋ ಕೆಲಸ ಮಾಡಬಹುದು, ಅಂತಹ ಅವಕಾಶಗಳನ್ನು ಮೋದಿಜಿ ಸರ್ಕಾರ ಕಲ್ಪಿಸಿಕೊಟ್ಟಿದೆ.

ಇಂತಹ ಸ್ಕಿಲ್ ಇರುವ ಕೆಲಸಗಾರರನ್ನು ಗುರುತಿಸಿ ವಿಶೇಷವಾದ ಪ್ರೋತ್ಸಾಹವನ್ನು ಕೊಡಬೇಕಾಗಿದೆ. ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರುಗಳಿಗೆ ಯಾರು ಸ್ವಂತ ಮನೆಗಳಿಲ್ಲ ಅವರಿಗೆ ಸರ್ಕಾರದ ವತಿಯಿಂದ ಅವರಿಗೆ ಸವಲತ್ತುಗಳನ್ನು ಹಾಗೂ ಆಶ್ರಯ ಅಡಿಯಲ್ಲಿ ಮನೆಗಳನ್ನು ಕೊಡುವ ಕೆಲಸಗಳನ್ನು ಮುಂದೆ ಮಾಡಲಿದ್ದೇವೆ.

ಸದರಿ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಮ್ಮ ವಡಿವೇಲು ರವರು,ಕಾರ್ಮಿಕ‌ ಇಲಾಖೆಯ ಅಧಿಕಾರಿಯಾದ ಶ್ರೀ ರಾಜೇಶ್ ಜಾಧವ್ ರವರು,BAI ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀ ಟಿ ಎನ್ ಹೇಮಂತ್ ರವರು, BAI ನ ಅಧ್ಯಕ್ಷರಾದ ಶ್ರೀ ಅಜಿತ್ ನಾರಾಯಣ್ ರವರು, ಕ್ರೆಡಾಯ್ ನ ಅಧ್ಯಕ್ಷರಾದ ಶ್ರೀ ಮುರಳೀಧರ ರವರು ಹಾಜರಿದ್ದರು.

About Author

Leave a Reply

Your email address will not be published. Required fields are marked *