ಮೈಸೂರು ದಸರಾ ವೇಳೆ ಹೊಸ ಉತ್ಸವ- ತಲಕಾಡು ಗಂಗರ ಇತಿಹಾಸ ತಿಳಿಸಲಿದೆ ಈ ಉತ್ಸವ!

1 min read

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ಇನ್ಮುಂದೆ ಪ್ರತಿ ವರ್ಷ ತಲಕಾಡು ಗಂಗರ ಉತ್ಸವವನ್ನ ದಸರಾ ಸಂದರ್ಭದಲ್ಲಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ‌.ಪಿ.ಯೋಗೇಶ್ವರ್ ಹೇಳಿಕೆ‌ ನೀಡಿದ್ದಾರೆ. ತಲಕಾಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು ಇದರಿಂದ ತಲಕಾಡಿನ ಅಭಿವೃದ್ಧಿ ಸಾಧ್ಯ ಎಂದರು.

ವಿವಿಧ ಇಲಾಖೆಗಳ ಜೊತೆ ಚರ್ಚೆ ಮಾಡಿ ರೂಪುರೇಷೆ ಮಾಡುತ್ತೇನೆ. ತಲಕಾಡು ಜನರಿಗೆ ಗಂಗರ ಪರಿಚಯವಾಗಬೇಕಿದೆ. ತಲಕಾಡು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಇಂತಹ ಸ್ಥಳದ ಅಭಿವೃದ್ಧಿ ಅವಶ್ಯಕತೆ ಇದೆ. ಆದರೆ ಮೂಲಭೂತ ಸೌಕರ್ಯಗಳು ಇಲ್ಲಿ ಕೊರತೆ ಇದ್ದು, ಇದನ್ನ ಸರಿಪಡಿಸಲು ಇಂತಹ ಉತ್ಸವಗಳನ್ನು ಮಾಡಿಕೊಂಡು ಕ್ಷೇತ್ರ ಅಭಿವೃದ್ಧಿ ಮಾಡಲಾಗುತ್ತೆ‌. ಇದಕ್ಕಾಗಿ ತಲಕಾಡು ಅಭಿವೃದ್ಧಿ ಸಮಿತಿ ಮಾಡುತ್ತೇವೆಂದು ಮೈಸೂರಿನ ತಲಕಾಡಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *