ಸುತ್ತೂರು ಶ್ರೀಗಳ ಜೊತೆ ಇಬ್ಬರು ಐಎಎಸ್‌ಗಳ ಗಲಾಟೆ ಬಗ್ಗೆ ಚರ್ಚೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ
1 min readಮೈಸೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸುತ್ತೂರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುತ್ತೂರು ಶ್ರೀಗಳ ಜೊತೆಗೆ ಸಿದ್ದರಾಮಯ್ಯ ಅನೌಪಚಾರಿಕ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಇಬ್ಬರು ಐಎಎಸ್‌ಗಳ ಗಲಾಟೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಐಎಎಸ್ ಅಧಿಕಾರಿಗಳು ಮಾಧ್ಯಮದವರನ್ನ ಕರೆದು ಮಾತನಾಡುವ ಅಧಿಕಾರ ಇಲ್ಲ. ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ಲದಕ್ಕೂ ಶಿಸ್ತು ಇರುತ್ತದೆ. ಅವರೇ ಹೀಗೆ ಮಾತನಾಡಿದೆ ಹೇಗೆ ಅಂತ ಸಿದ್ದರಾಮಯ್ಯ ಹೇಳಿದರು.
ಐಎಎಸ್‌ಗಳ ಮಾತುಕೇಳಿ ಸರ್ಕಾರ ನಡೆಸಲು ಆಗುತ್ತಾ? ಮೈಸೂರಿನಲ್ಲಿ ನನ್ನ ಆಡಳಿತದ ವೇಳೆ ಹೊಸ ಡಿಸಿ ಕಚೇರಿ ಉದ್ಘಾಟಿಸಿದ್ದೇನೆ. ಇನ್ನು ಅಲ್ಲಿ ಸಂಪೂರ್ಣವಾಗಿ ಹೊಸ ಕಚೇರಿಗೆ ಶಿಫ್ಟ್ ಆಗಿಲ್ಲ. ಡಿಸಿ ಮನೆ ಹತ್ತಿರ ಇದೇ ಅನ್ನೋ ಕಾರಣಕ್ಕೆ ಅವರು ಹಳೆ ಕಚೇರಿಯಲ್ಲೇ ಉಳಿದಿರಬಹುದು. ಶಾಸನ ಸಭೆಯಲ್ಲಿ ಉತ್ತರ ಕೊಡಬೇಕಾದವರು ನಾವು. ಅಧಿಕಾರಿಗಳು ಬಂದು ಅಲ್ಲಿ ಉತ್ತರ ಕೊಡಬೇಕಿಲ್ಲ. ಹಕ್ಕು ಚ್ಯುತಿ ಆದಾಗ ಮಾತ್ರ ಅವರು ಉತ್ತರ ಕೊಡಲು ಸಾಧ್ಯ. ಅಧಿಕಾರಿಗಳ ಮಾತು ಕೇಳಿಕೊಂಡು ಸರ್ಕಾರ ನಡೆಸೋದು ಸಾಧ್ಯನಾ? ಅಂತ ಹೇಳಿದರು.