ಈ ಸರ್ಕಾರಕ್ಕೆ ವಾಕ್ಸಿನ್ ಪೂರೈಸಲು ಆಗುತ್ತಿಲ್ಲ: ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ;- ಸಿದ್ದರಾಮಯ್ಯ
1 min readಮೈಸೂರು: ವಾಕ್ಸಿನ್ ವಿಚಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ ಅಂತ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ವಾಕ್ಸಿನ್ ಸ್ಟಾಕ್ ಇದ್ದರೆ ಜನ ಯಾಕೆ ವಾಕ್ಸಿನ್ ಗಾಗಿ ಕ್ಯೂ ನಿಲ್ಲುತ್ತಿದ್ದರು. ವಾಕ್ಸಿನ್ ಗಾಗಿ ಜನರು ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ವಾಕ್ಸಿನ್ ಪೂರೈಸಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ. ವಾಕ್ಸಿನ್ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರ ವಿಫಲವಾಗಿವೆ. ಸರಿಯಾದ ಪ್ಲ್ಯಾನ್ ಮಾಡದೆ ವಾಕ್ಸಿನ್ ಗಾಗಿ ಜನ ಅಲೆಯುವಂತೆ ಮಾಡಿದೆ ಎಂದರು.
ರಾಜ್ಯದ ಇವತ್ತಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸಬಾರದು. ಪಿಯುಸಿ ಪರೀಕ್ಷೆ ರದ್ದಾದ ಮೇಲೆ SSlC ಪರೀಕ್ಷೆ ಯಾಕೆ ಮಾಡುತ್ತಿದ್ದೀರಿ. SSLC ಪರೀಕ್ಷೆ ನಡೆಸುವ ಬಗ್ಗೆ ಆರೋಗ್ಯ ಸಚಿವರೇ ವಿರೋಧ ಮಾಡಿದ್ದಾರೆ. ಆದರು ಯಾಕೆ SSlC ಪರೀಕ್ಷೆ ನಡೆಸುತ್ತಿದ್ದಾರೆ ಯಾಕೆ ಗೊತ್ತಿಲ್ಲ.
ತುರ್ತಾಗಿ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಕರೆಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೆ. ಇನ್ನು ಯಾವ ಸಂದರ್ಭದಲ್ಲಿ ಅಧಿವೇಶನ ಕರೆಯುತ್ತಾರೆ. ವಿರೋಧ ಪಕ್ಷಗಳನ್ನ ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಈಗಾಗಿಯೇ ಅಧಿವೇಶನ ಕರೆಯುತ್ತಿಲ್ಲ. ಅಧಿವೇಶನ ಕರೆದರೆ ಸರ್ಕಾರದ ಬಣ್ಣ ಬದಲಾಗುತ್ತೆ ಎಂಬುದು ಅವರಿಗೆ ಗೊತ್ತಿದೆ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅಧಿವೇಶನ ಕರೆಯಬೇಕು. ನಾನು ಈಗಲು ಆಗ್ರಹ ಮಾಡುತ್ತೇನೆ. ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ.
ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರ:
ಅದಕ್ಕು ನಮಗು ಯಾವುದೇ ಸಂಬಂಧ ಇರೋದಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ, ಆದರು ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ. ಇದರಲ್ಲಿ ನನ್ನದಾಗಲಿ ಡಿಕೆಶಿಯವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದರು.
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬುದು ಚರ್ಚೆಯೇ ನಡೆದಿಲ್ಲ. ನನ್ನ ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ. ಮೊನ್ನೆ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಸೋಸೆ ಮನೆಗೆ ಬರುವವರಗು ಹೊರಗಿನವಳು. ಬಂದ ಮೇಲೆ ಸೋಸೆ ಮನೆಯವಳೇ ಆಗುತ್ತಾಳೆ ಅಂತ. ಅದೇ ರೀತಿ ನಾನು ಹೊರಗಿನಿಂದ ಬಂದವನು. ಬಂದ ಮೇಲೆ ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮನೆಯವನೇ- ಸಿದ್ದರಾಮಯ್ಯ ಹೇಳಿಕೆ. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶ ನಂತರ. ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ಚುನಾವಣೆ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ.
ಚಾಮರಾಜನಗರಕ್ಕೆ ಮುಖ್ಯಮಂತ್ರಿ ಹೋಗಬೇಕು. ಅಷ್ಟು ದೊಡ್ಡ ದುರಂತ ನಡೆದರು ಅಲ್ಲಿಗೆ ಹೋಗದಿದ್ದರೆ ಹೇಗೆ. ಸಿಎಂ ಮೂಢನಂಬಿಕೆಗೆ ಅಂಟಿಕೊಂಡು ಕೂತಿದ್ದಾರೆ. ಈಗಾಗಿ ಸಿಎಂ ಚಾಮರಾಜನಗರಕ್ಕೆ ಹೋಗುತ್ತಿಲ್ಲ. ನಾನು ಅಧಿಕಾರದಲ್ಲಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ಅಲ್ಲಿಯ ಜನರ ಕಷ್ಟ ಕೇಳಲು ಸಿಎಂ ಭೇಟಿ ನೀಡಲಿ ಅಂತ ಹೇಳಿದರು.
ಸಿದ್ದು ಕೊರಳಲ್ಲಿ ಕೊರೊನಾ ಎದುರಿಸುವ ಮಂತ್ರ:
ಕೊರೊನಾ ತಡೆಯಲು ಆ್ಯಂಟಿ ಕೊರೊನಾ ಬಳಸುತ್ತಿರುವ ಸಿದ್ದರಾಮಯ್ಯ. ಸದಾ ಕೊರೊಳಲ್ಲಿ ಸುತ್ತಿಕೊಂಡು ತಿರುಗುವ ಮಾಜಿ ಮುಖ್ಯಮಂತ್ರಿ. ಕೊರೊನಾ ಬಂದಾಗಿನಿಂದ ಟ್ಯಾಗ್ ಬಳಕೆ ಮಾಡಿತ್ತಿರುವ ನಾಯಕ. ಆ್ಯಂಟಿ ಕೊರೊನಾ ಟ್ಯಾಗ್ ಬಳಸಿದ್ರೆ ವೈರಸ್ ಬರಲ್ಲ ಎನ್ನುವ ನಂಬಿಕೆ. ಟ್ಯಾಗ್ ಮೇಲಿನ ನಂಬಿಕೆಯಿಂದ ಬಹಳ ದಿನಗಳಿಂದ ಬಳಕೆ. ಈಗಾಗಲೇ ಎರಡು ಬಾರಿ ಕೊರೊನಾಗೆ ಸಿಲುಕಿರುವ ಸಿದ್ದರಾಮಯ್ಯ. ಸದಾ ಕೊರಳಲ್ಲೇ ಇದೆ ಕರೋನಾ ಟ್ಯಾಗ್.
ಸುತ್ತೂರು ಮಠದಲ್ಲಿ ಸಿದ್ದರಾಮಯ್ಯ ಕೊರೊನಾ ಪಾಠ: ಲಸಿಕೆ, ಮಾಸ್ಕ್ ಧರಿಸುವ ಬಗ್ಗೆ ಜನರಿಗೆ ಪ್ರವಚನ!
ತಪ್ಪು ಮಾಹಿತಿಯಿಂದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳೋದ್ರಿಂದ ಏನು ಸಮಸ್ಯೆ ಆಗಲ್ಲ. ವೈದ್ಯರು, ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳೋದ್ರಲ್ಲಿ ಏನು ಸಮಸ್ಯೆ ಆಗಲ್ಲ. ವಿದ್ಯಾವಂತರಲ್ಲೂ ಅರಿವು ಮೂಡಿಲ್ಲ. ಇನ್ನೂ ಅವಿದ್ಯಾವಂತರ ಪಾಡೇನು..? ನಮ್ಮ ಅತ್ತಿಗೆ ಕೊರೊನ ದಿಂದ ಸತ್ತು ಹೋದರು. ಕೊರೊನ ಯಾರನ್ನು ಬಿಡುತ್ತಿಲ್ಲ. ವಿದ್ಯಾವಂತರಿಗೂ, ಅವಿದ್ಯಾವಂತರಿಗೂ ಕೊರೊನ ಬರುತ್ತೆ. ಈ ಕೊರೊನ ಮುಗಿಯುವ ವರೆಗೂ ಮಾಸ್ಕ್ ಹಾಕಿಕೊಳ್ಳಬೇಕು ಎಂದರು.
ಕೆಲವರು ಬಾಯಿಗೆ ಮಾಸ್ಕ್ ಹಾಕಿಕೊಂಡು ಮೂಗಿನ ಮೇಲೆ ಸರಿಯಾಗಿ ಹಾಕುವುದಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕು ಹಾಗೆ ಟೆಸ್ಟ್ ಹೆಚ್ಚಾಗಿ ಮಾಡಿಸಬೇಕು. ಇನ್ನೂ ಕೊರೊನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ. ವ್ಯಾಕ್ಸಿನ್ ಬಗ್ಗೆಯೂ ಅರಿವು ಮೂಡಿಲ್ಲ. ಸ್ವಲ್ಪ ಕೊರೊನ ಕಡಿಮೆ ಯಾಗುತ್ತಿದ್ದಂತೆ ಮತ್ತೆ ಜನ ಸೇರುತ್ತಾರೆ. ಮತ್ತೆ ಮಾಸ್ಕ್ ಧರಿಸುವುದನ್ನ ಬಿಡುತ್ತಾರೆ. ಆಗ ಮುಂದಿನ ಅಲೆ ಶುರುವಾಗುತ್ತದೆ.
ಈ ಬಗ್ಗೆ ಜನರು ಎಚ್ಚರ ವಹಿಸಬೇಕು. ಆಗ ಮಾತ್ರ ಕೊರೊನ ತಡೆಯಲು ಸಾಧ್ಯ ಅಂತ ಸುತ್ತೂರು ಮಠದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.