ಮಡಿಕೇರಿ ಬಳಿ ಬಿರುಕು ಬಿಟ್ಟ ರಸ್ತೆ- ಆತಂಕದಲ್ಲಿ ವಾಹನ ಸವಾರರು!
1 min readಮಡಿಕೇರಿ : ಉತ್ತರ ಕರ್ನಾಟಕ ಸೇರಿ ಹಲವೆಡೆ ಮಳೆಯ ರೌದ್ರ ನರ್ತನ ಶುರುವಾಗಿದೆ. ಈ ನಡುವೆ ಕೆರೆ ಕಟ್ಟೆ ತುಂಬಿ ಹರಿಯುತ್ತಿದ್ದು ಹಲವು ಕಡೆ ಜನರು ಮನೆ ಮಟ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರುತ್ತಿದ್ದಾರೆ. ಈ ನಡುವೆ ಕೊಡಗು ಭಾಗದಲ್ಲು ಸಹ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮಳೆಯಿಂದ ಜನರು ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಮಾದಾಪುರ ಸಮೀಪ ಮಡಿಕೇರಿ ಮುಖ್ಯ ರಸ್ತೆಯ ಹಟ್ಟಿ ಹೊಳೆ ಸಮೀಪ ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಇಂಜಿನಿಯರ್ ವಿಜಯಕುಮಾರ್ ರವರನ್ನು ಕರೆಸಿ ಕೂಡಲೇ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದ್ದು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಸ್ಥಳೀಯ ಶಾಸಕರಾದ ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ.