ಮೈಸೂರು KSRTCಯಿಂದ ಜೋಗ್ ಫಾಲ್ಸ್‌ಗೆ ಟೂರ್ ಪ್ಯಾಕೇಜ್!
1 min readಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ಗ್ರಾಮಾಂತರ ವಿಭಾಗದಿಂದ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಜೋಗ್ ಫಾಲ್ಸ್ಗೆ ಪ್ಯಾಕೇಜ್ ಟೂರ್‌ನ್ನ ಪ್ರಾರಂಭಿಸಲಾಗುತ್ತಿದೆ.
ಪ್ರತಿ ಶುಕ್ರವಾರ ಮತ್ತು ಶನಿವಾರಗಳಂದು ಮೈಸೂರಿನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದ್ದು, ನಿಗಮದ ವತಿಯಿಂದ ನಾನ್ ಎಸಿ ಸ್ಲೀಪರ್ ಮಾದರಿ ವಾಹನವನ್ನು ಬಳಸಲಾಗುತ್ತಿದ್ದು, ವರದಹಳ್ಳಿ, ವರದಮೂಲ, ಇಕ್ಕೇರಿ, ಕಳಡಿ ಮತ್ತು ಜೋಗ್ ಫಾಲ್ಸ್ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆ, ಹೋಟೆಲ್ ವ್ಯವಸ್ಥೆ ಹಾಗೂ ಶಾಪಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರಯಾಣವನ್ನು ಕೈಗೊಳ್ಳುವ ವಯಸ್ಕರರಿಗೆ 1800 ರೂ, 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 1600 ರೂ ದರವನ್ನು ನಿಗದಿ ಮಾಡಲಾಗಿದೆ. ಮುಂಗಡ ಆಸನ ಕಾಯ್ದಿರಿಸಲು ಪ್ರಯಾಣಿಕರ ಅನಕೂಲಕ್ಕಾಗಿ ನಿಗಮದ ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಲ್ಲಿ, ಕೆ.ಎಸ್.ಆರ್.ಟಿ.ಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್‌ನಲ್ಲಿ ಹಾಗೂ ಆನ್‌ಲೈನ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.