ಮೈಸೂರು ಮೃಗಾಲಯದಲ್ಲಿ ದಾಖಲೆಯ ಜಿರಾಫೆ ಮರಿ ಜನನ!
1 min read
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿಗಾ ಲಕ್ಷ್ಮಿ ಎಂಬ ಹೆಸರಿನ ಜಿರಾಫೆ ತಾಯಿಯಾಗಿದೆ. ಈ ಮೂಲಕ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗಳ ದಾಖಲೆ ನಿರ್ಮಾಣವಾಗಿದೆ. ಹೌದು, ಲಕ್ಷ್ಮಿ ಮತ್ತು ಭರತ್ ಜೋಡಿ ಜಿರಾಫೆಗೆ ಜುಲೈ 12ರಂದು ಒಂದು ಗಂಡು ಮರಿ ಜಿರಾಫೆ ಜನನವಾಗಿದೆ.

ಲಕ್ಷ್ಮಿಗೆ ಇದು ನಾಲ್ಕನೇ ಮರಿಯಾಗಿದೆ. ಮೈಸೂರು ಮೃಗಾಲಯದಲ್ಲಿ ಇಲ್ಲಿಯವರೆಗೆ 22 ಜಿರಾಫೆ ಮರಿಗಳ ಪೈಕಿ (17 ಗಂಡು ಮತ್ತು 5 ಹೆಣ್ಣು ) ಜನನದ ದಾಖಲೆಯನ್ನು ಹೊಂದಿದೆ. ಲಕ್ಷ್ಮಿ ತನ್ನ ಮರಿಯ ಲಾಲನೆ ಮತ್ತು ಪಾಲನೆಯನ್ನು ಮಾಡುತ್ತಿದ್ದು, ಮರಿಯು ಆರೋಗ್ಯವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
