ಪ್ರಯಾಣದ ಜೊತೆ ಲಗೇಜ್‌ಗು ಇನ್ಮುಂದೆ ಟಿಕೆಟ್!
1 min readಇಷ್ಟು ದಿನ ರೈಲಿನಲ್ಲಿ ನಾವು ಪ್ರಯಾಣ ಮಾಡೋಕೆ ಟಿಕೆಟ್ ತೆಗೆದುಕೊಂಡು ಹೋಗ್ತಿದ್ವಿ. ಆದ್ರೆ ಈಗ ನಮ್ಮ ಜೊತೆ ಇರೋ ಲಗೇಜ್‌ಗು ಹಣ ಕೊಡಬೇಕು. ಹೌದು ರೈಲ್ವೆ ಇಲಾಖೆ ಇನ್ಮುಂದೆ ಅತೀ ಹೆಚ್ಚಿನ ಲಗೇಜ್ ಕ್ಯಾರಿ ಮಾಡಿದರು ಹಣ ನೀಡಬೇಕಿದೆ. ಇದಕ್ಕಾಗಿ ಮುನ್ನವೇ ರಿಸರ್ವೇಶನ್ ಮಾಡಿಸಿ ಬಳಿಕ ಲಗೇಜ್ ಕ್ಯಾರಿ ಮಾಡಬೇಕಿದೆ.
ಇದರಲ್ಲಿ 70 ಕೆಜಿ, 50 ಕೆಜಿ ಹೀಗೆ ತರಹವರಿ ಹೆಚ್ಚಿನ ಲಗೇಜ್‌ಗಳಿಗೆ ಹಣ ನೀಡಬೇಕಿದೆ. ಆಗೊಮ್ಮೆ ಇಷ್ಟೊಂದು ಕೆಜಿ ಲಗೇಜ್ ತೆಗೆದುಕೊಂಡು ಹೋಗುವ ವೇಳೆ ಟಿಕೆಟ್ ಪಡೆಯದಿದ್ದರೆ ಟಿಕೆಟ್ ದರದ ದುಪ್ಪಟ್ಟು ಹಣ ತೆತ್ತಬೇಕಾಗುತ್ತದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.