ಚಾಮರಾಜೇಶ್ವರ ದೇಗುಲದ ಕುಂಭಾಭಿಷೇಕ ಸಂಭ್ರಮ!

1 min read

ಚಾಮರಾಜೇಶ್ವರ ದೇಗುಲದ ಕುಂಭಾಭಿಷೇಕ ಸಂಭ್ರಮ!

ಚಾಮರಾಜನಗರ : ಗಡಿ ಜಿಲ್ಲೆಯ ಜನರ ಆರಾಧ್ಯ ದೈವ. ಚಾಮರಾಜನಗರದ ಹೃದಯ ಭಾಗದಲ್ಲಿರುವ ಚಾಮರಾಜೇಶ್ವರನ ಜಾತ್ರೆ ಐದು ವರ್ಷದ ಬಳಿಕ ಕಳೆಗಟ್ಟಿದೆ. 2017ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ಜಾತ್ರೆ ಸ್ಥಗಿತಗೊಳಿಸಲಾಗಿತ್ತು. ರಥಕ್ಕೆ ಬೆಂಕಿ ಬಿದ್ದಿರುವುದು ಅಪಶಕುನವೆಂದು ಹೊಸ ರಥ ನಿರ್ಮಾಣವಾಗುವ ವರೆಗೆ ಜಾತ್ರೆ ಮಾಡದೆ ಇರುವ ತೀರ್ಮಾನಕ್ಕೆ ಬರಲಾಯಿತು. ನಂತರ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಆಗಮಿಕರ ಪ್ರಯತ್ನದ ಫಲವಾಗಿ 1.20 ಕೋಟಿ ರೂ.‌ವೆಚ್ಚದಲ್ಲಿ ನೂತನ ಬ್ರಹ್ಮ ರಥ ಸಜ್ಜುಗೊಂಡಿದ್ದು ಚಾಮರಾಜನಗರ ತಲುಪಿದೆ. ಮೂರು ದಿನಗಳಿಂದ ನಗರದಲ್ಲಿ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ 10 ರಿಂದ 10.30ರ ಶುಭ ಮುಹೂರ್ತದಲ್ಲಿ ಕುಂಭಾಭಿಷೇಕ ನೆರವೇರಿತು. ಇನ್ನು ಜುಲೈ 13ರಂದು ಅದ್ದೂರಿ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ ಅವರನ್ನು ಕರೆಸಲು ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ.

ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜಿಲ್ಲೆಯ ಜನರು ಚಾಮರಾಜೇಶ್ವರ ದೇವಾಲಯಕ್ಕೆ ನಿತ್ಯ ಆಗಮಿಸುತ್ತಿದ್ದು, ಅದಕ್ಕಾಗಿಯೇ ಕುಂಭಾಭಿಷೇಕ ಏರ್ಪಡಿಸಿ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇನ್ನು ಶಾಸಕ ಪುಟ್ಟರಂಗಶೆಟ್ಟಿ ಸ್ವಯಂ ಸೇವಕನಂತೆ ನಿಂತು ಎಲ್ಲ ಕೆಲಸ ನಿರ್ವಹಿಸಿದರು. ಬೇಡಿದ್ದನ್ನು ಕರುಣಿಸುವ ಚಾಮರಾಜೇಶ್ವರ ಜಾತ್ರೆ ನಡೆಯುತ್ತಿರುವುದು ಭಕ್ತಾಧಿಗಳು ಸಂತೋಷ ವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *