ಇದು ಶಾಲಾ ಮಕ್ಕಳೇ ನಿರ್ಮಿಸಿದ ತೋಟ!

1 min read
  • ಅದ್ಭುತವಾದ ಕೈತೋಟ ನಿರ್ಮಿಸಿದ ಶಾಲಾ ಮಕ್ಕಳು

    ಮೈಸೂರು: ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಹುಣಸೂರು ತಾಲೂಕಿನ ಗದ್ದಿಗೆ ಮುಖ್ಯ ರಸ್ತೆಯಲ್ಲಿ ಸಿಗುವ ದೇವಗಳ್ಳಿ ಗ್ರಾಮ ನಿಸರ್ಗ ಸಂಪತ್ತಿನಿಂದ ಕೂಡಿದೆ. ಸುಮಾರು 50ಕ್ಕು ಹೆಚ್ಚು ಮನೆಗಳಿರುವ ಈ ಗ್ರಾಮದ ಸರ್ಕಾರಿ ಶಾಲೆ ಎಲ್ಲರನ್ನೂ ಆಕರ್ಷಿಸುತ್ತಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಮುಖ್ಯೊಪದ್ಯರು ಜೊತೆ ಗೂಡಿ ಮಾಡಿರುವ ಶಾಲಾ ಕೈತೋಟ, ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದೆ.

ಈ ಕೈತೋಟದ ವೈಶಿಷ್ಟ್ಯವೆಂದರೆ ಆವರಣದ ಸುತ್ತ ಸುಮಾರು 50ಕ್ಕೂ ಹೆಚ್ಚು ಔಷಧೀಯ, ಹೂವಿನ, ಗಿಡ ಮರಗಳಿಂದ ಕೂಡಿದೆ. ಅನೇಕ ಬಗೆಯ ಹೂವುಗಳನ್ನು ಈ ತೋಟದಲ್ಲಿ ಕಾಣಬ ಹುದಾಗಿದೆ. ಶಾಲೆಯ ಕೈತೋಟ ದಲ್ಲಿ ಬೆಂಡೆಕಾಯಿ, ಹೀರೇಕಾಯಿ, ಹಾಗಲ ಕಾಯಿ, ಮೆಣಸಿನಾಯಿ, ಹೇರಳವಾಗಿ ಬೆಳೆಯಲಾಗುತ್ತಿದೆ. ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಕೈತೋಟದ ತರಕಾರಿಯನ್ನೇ ಬಳಕೆ ಮಾಡಲಾಗುತ್ತಿದೆ.

‘ಶಿಕ್ಷಕರು ಹಾಗೂ ಮುಖ್ಯೊಪಾದ್ಯರ ಸಹಯೋಗದಲ್ಲಿ ಈ ಕೈತೋಟ ಬೆಳೆಸಲಾ ಗಿದೆ. ಮಕ್ಕಳ ಸಹಕಾರ, ಸಂಘ ಸಂಸ್ಥೆಗಳ ಹಾಗೂ ದಾನಿಗಳು ದೇಣಿಗೆಯ ಫಲವಾಗಿ ಈ ಕೈತೋಟ ಅರಳಿ ನಿಂತಿದೆ. ಮಕ್ಕಳಿಗಷ್ಟೇ ಜವಾಬ್ದಾರಿ ವಹಿಸಿಲ್ಲ. ಶಿಕ್ಷಕರೂ ಮಕ್ಕಳೊಂದಿಗೆ ಬೆರೆತು ಇಲ್ಲಿನ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ನಮ್ಮ ಶಾಲೆಯ ಕೈತೋಟದಿಂದ ಮಕ್ಕಳ ಮಧ್ಯಾಹ್ನದ ಬಿಸಿಯೂಟ ತರಕಾರಿ ಬಳಕೆ ಮಾಡುತ್ತಿದ್ದೇವೆ’ ಎಂದು ಶಾಲೆಯ ಶಿಕ್ಷಕಿ‌ ಶಶಿಕಲಾ ಹೇಳುತ್ತಾರೆ.

ಸ್ವತಃ ಕಾಳಜಿ ವಹಿಸಿ ಹಲವು ಬಗೆಯ ಹೂವಿನ ಗಿಡಗಳನ್ನು ತರಿಸಿದ್ದೇನೆ. ಶಾಲೆಯ ಕೈತೋಟ ನಿರ್ವಹಣೆ ಮಾಡಿ ಕೊಂಡು ಹೋಗುತ್ತಿದ್ದೇವೆ. ಇಲ್ಲಿರುವ ಅನೇಕ ಔಷಧೀಯ ಸಸ್ಯಗ ಳನ್ನು ಮಕ್ಕಳ ಆರೋಗ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಹಲವಾರು ದಿನಗಳಿಂದ ನಾವೆಲ್ಲ ಶ್ರಮಿಸಿ ದ್ದೇವೆ. ಮಕ್ಕಳು ನಿತ್ಯ ಕೈತೋಟಕ್ಕೆ ನೀರು ಹಾಕುವ ಕೆಲಸ ಮಾಡುತ್ತಾರೆ’ ಎನ್ನುತ್ತಾರೆ.

ಈ ಶಾಲೆಯ ಒಳಗಡೆ ಪ್ರವೇಶ ಮಾಡಿದರೆ, ಹಲವಾರು ಬಗೆಯ ಸಸ್ಯಗಳು, ಮರಗಳು ಸ್ವಾಗತಿಸುತ್ತವೆ. ಶಾಲೆಯ ಕಾಂಪೌಂಡ್‌ಗೆ ಹರಡಿರುವ ಬಳ್ಳಿಗಳು ಗಮನ ಸೆಳೆಯುತ್ತವೆ. ಅನೇಕ ಬಗೆಯ ಹೂವಿನ ಗಿಡಗಳು ಆಕರ್ಷಿಸುತ್ತವೆ. ಮಕ್ಕಳ ಮನಸ್ಸಿನ ಜೊತೆಗೆ ಹಸಿವನ್ನು ನೀಗಿಸುವ ಕೆಲಸವನ್ನು ಈ ತೋಟ ಮಾಡುತ್ತಿದೆ.

‘ಮಕ್ಕಳಿಗೆ ಅಕ್ಷರ ಕಲಿಸುವುದರ ಜೊತೆಗೆ ಸುಂದರವಾದ ವಾತಾವರ ಣದಲ್ಲಿ ಬೆಳೆಸುವುದು ಅವಶ್ಯಕವಿದೆ. ಈ ಶಾಲೆಯ ಶಿಕ್ಷಕರು ಕೈತೋಟ ನಿರ್ಮಾಣ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪರಿಸರ ಕಾಳಜಿ ಬೆಳೆಸುತ್ತಿರುವುದು ಸಂತಸದ ಸಂಗತಿ’ ಎನ್ನುತ್ತಾರೆ

About Author

Leave a Reply

Your email address will not be published. Required fields are marked *