ದೇಶದ ಮೊದಲ ಮಹಿಳಾ ಪ್ರಾಥಮಿಕ ಶಾಲೆ ಉಳಿಸಲು ಹೋರಾಟ
1 min readಮೈಸೂರು: ದೇಶದ ಮೊದಲ ಮಹಿಳಾ ಪ್ರಾಥಮಿಕ ಶಾಲೆ ಉಳಿಸಲು ಹೋರಾಟ ಮುಂದುವರೆದಿದೆ. ಈ ಐತಿಹಾಸಿ ಶಾಲೆ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದೆ.
ನಿರಂತರವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಮಾಜಿ ಸಚಿವರೊಬ್ಬರು ಸಾಥ್ ನೀಡಿದ್ದಾರೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಮಹಾದೇವಪ್ಪ ಜೊತಗೆ ಕಾಂಗ್ರೆಸ್ ಸಾಥ್ ನೀಡಿದೆ.
ಈ ಶಾಲೆ 130 ವರ್ಷದಷ್ಟು ಪುರಾತನವಾದ್ದು. ಸರ್ಕಾರಿ ಎನ್.ಟಿ.ಎಂಎಸ್ ಶಾಲೆ ಮಹಾರಾಣಿಯವರ ಕೊಡುಗೆಯಾಗಿದೆ. ಇಲ್ಲಿ ರಾಮಕೃಷ್ಣ ಆಶ್ರಮ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ. ರಾಮಕೃಷ್ಣ ಆಶ್ರಮ ನಡೆ ಖಂಡಿಸಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದೆ. ಪ್ರತಿಭಟನೆಗೆ ಹಲವು ಕನ್ನಡಪರ ಸಂಘಟನೆಗಳು ಸಾಥ್ ನೀಡಿವೆ. ದಿನೆ ದಿನೆ ಕಾವು ಪಡೆದುಕೊಳ್ಳುತ್ತಿದೆ ಶಾಲೆ ಉಳಿಸಿ ಅಭಿಯಾನ.