ಹೇಳಿಕೆ ಕೊಟ್ಟ ಮೇಲೆ ಸುಮಾಲತಾ ಅವರು ಜಲಾಶಯದ ಬಿರುಕನ್ನು ತೋರಿಸಬೇಕು: ಪ್ರತಾಪ್ ಸಿಂಹ

1 min read

ಮೈಸೂರು: ಕೆ.ಆರ್.ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ಸಂಸದ ಸುಮಾಲತಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದು ಜಲಾಶಯ ನಿಜಕ್ಕು ಬಿರುಕು ಬಿಟ್ಟಿದೆ ಅಂದರೆ‌ ಅದನ್ನು ತೋರಿಸಬೇಕು ಎಂದಿದ್ದಾರೆ.

ಮಾಧ್ಯಮದವರನ್ನಾದರು ಕರೆದುಕೊಂಡು ಹೋಗಿ ತೋರಿಸಲಿ. ಬಿರುಕು ಬಿಟ್ಟಿಲ್ಲ ಅಂತ ಎಂಜಿನಿಯರ್ ಹೇಳಿದ್ದಾರೆ. ಒಂದು ವೇಳೆ ಬಿರುಕು ಬಿಟ್ಟಿದ್ದರೆ. ಸಿಎಂ‌ ಬಳಿ ಸರಿಪಡಿಸುವ ಕೆಲಸ ಮಾಡೋಣ. ಇದು ಬಿರುಕು ಬಿಟ್ಟಿದಿಯಾ ಇಲ್ಲವ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಅಂತ ಸುಮಲತಾ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಬಿರುಕು ಬಿಟ್ಟಿದೆ ಹೇಳುತ್ತಿರುವವರನ್ನ ಎಲ್ಲಿ ಬಿರುಕು ಬಿಟ್ಟಿದೆ ಅಂತ ತೋರಿಸಿ ಅಂತ ಕೇಳಿ. ಹೇಳಿಕೆ ಕೊಟ್ಟ ಮೇಲೆ ಬಿರುಕನ್ನು ತೋರಿಸುವ ಜವಬ್ದಾರಿ ಅವರಿಗಿದೆ. ಹೇಳಿಕೆ ಪ್ರತಿ ಹೇಳಿಕೆ ಕೊಡುವುದು ರಾಜಕೀಯವಾಗುತ್ತೆ. ಬಿರುಕು ಬಿಟ್ಟಿದ್ದರೆ ಇದು ಗಂಭೀರ ವಿಚಾರ.

ನಿನ್ನೆ ಅಡ್ಡಗಟ್ಟಿದ್ದರು ಎಂಬ ಹೇಳಿಕೆ ವಿಚಾರ: ಹೇಳಿಕೆ ಕೊಡುವುದಕ್ಕೆ ಮಹತ್ವ ಕೊಡುವುದಿಲ್ಲ. ಮಂಡ್ಯದಲ್ಲಿ ಸ್ಥಳಿಯ ರಾಜಕೀಯ ನಡೆಯುತ್ತಿರುತ್ತದೆ. ವಾದ ವಿವಾದದ ಬದಲು ಬಿರುಕು ಬಿಟ್ಟಿರುವುದನ್ನು ತೋರಿಸಲಿ. ಮಾಧ್ಯಮಗಳನ್ನ ಕರೆದುಕೊಂಡು ಹೋಗಿ ತೋರಿಸಲಿ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *