5 ಗಂಟೆಗೆ ಬೆಂಗಳೂರು ಬಿಟ್ಟು 8 ಗಂಟೆ ಮೈಸೂರು ತಲುಪಬೇಕಿದ್ದ ಟ್ರೈನ್ ನಾಗನಹಳ್ಳಿಯಲ್ಲಿ ಸ್ಟಾಪ್- ಸಿಗ್ನಲ್ ಸಿಗದ ಕಾರಣ- ಪ್ರಯಾಣಿಕರ ಪರದಾಟ
1 min readಮೈಸೂರು: 8 ಗಂಟೆಗೆ ಮೈಸೂರು ಸೇರಬೇಕಾದ ರೈಲು ಸಿಗ್ನಲ್ ಸಿಗದೆ ಮೈಸೂರು ಹೊರವಲಯದ ನಾಗನಹಳ್ಳಿಯಲ್ಲೇ ಸ್ಟಾಪ್ ಆಗಿ ಪ್ರಯಾಣಿಕರು ಪರದಾಡಿದ್ದಾರೆ.
ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ರೈಲು. ರಾತ್ರಿ 8 ಗಂಟೆಗೆ ಮೈಸೂರು ತಲುಪಬೇಕಿತ್ತು. ಆದರೆ ಮೈಸೂರು ರೈಲು ನಿಲ್ದಾಣದ ಬಳಿ ಕಾಮಗಾರಿ ಹಿನ್ನೆಲೆ ಒಂದು ಗಂಟೆಗೂ ಹೆಚ್ಚು ಕಾಲ ನಿಂತಿದ್ದು ಮಹಿಳೆಯರು ಮಕ್ಕಳ ಪರದಾಡಿದ್ದಾರೆ. ಅಲ್ಲದೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ರೈಲ್ವೇ ಅಧಿಕಾರಿಗಳ ಮಾಹಿತಿ ಪ್ರಕಾರ ರಾತ್ರಿ 10.30ರ ವೇಳೆಗೆ ರೈಲು ಮೈಸೂರು ತಲುಪಲಿದೆ ಅಂತ ಮಾಹಿತಿ ನೀಡಿದೆ..