ಮೈಸೂರಿಗೆ ಸಾಲ ತೀರಿಸಲು ಬಂದಿದ್ದ ಮಹಿಳೆಯ ಬಳಿ ಇದ್ದ ನಾಲ್ಕು ಲಕ್ಷ ಎಗರಿಸಿದ ಕಿರಾತಕಿ!

1 min read

ಮೈಸೂರು : ತನ್ನ ಸಾಲ ತೀರಿಸಲು ತಂದ ಹಣವನ್ನ ಸೀರೆ ಅಂಗಡಿಯಲ್ಲಿ ಚಾಲಕಿ ಕಿರಾತಕಿ ಕದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು ನಾಲ್ಕು ಲಕ್ಷ ಹಣ ಕಳೆದುಕೊಂಡ‌ ಮಹಿಳೆ ಇದೀಗಾ ಪೊಲೀಸರ ಬಳಿ ಗೋಳಾಡುತ್ತಿದ್ದಾರೆ. ಸಾಲ ತೀರಿಸಲು ಬೆಂಗಳೂರಿನಿಂದ ಬಂದಿದ್ದ‌‌ ಮಹಿಳೆ ಸೀರೆ‌ ಖರೀದಿಸಲು‌ ಮೈಸೂರಿನ ಸುಮಂಗಲಿ ಸಿಲ್ಕ್‌ ಅಂಗಡಿಗೆ ತೆರಳಿದ್ದಾರೆ‌‌. ಹಣ ತಂದಿದ್ದ ಬ್ಯಾಗ್ ಸಹಿತ‌ ತೆರಳಿದ್ದ‌ ಮಹಿಳೆ ಬಳಿಯ ಬ್ಯಾಗ್ ನಲ್ಲಿದ್ದ ಹಣವನ್ನು ಕದ್ದು ಮಹಿಳೆ ಪರಾರಿಯಾಗಿದ್ದಾಳೆ.

ನಾಲ್ಕು ಲಕ್ಷ ದೋಚಿದ ಕಳ್ಳಿ

ಹಣ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದ್ದು, ಹಣ ಕಳೆದುಕೊಂಡ ಮಹಿಳೆ ನಾಗಮ್ಮ ಸಾಲ ಮಾಡಿಕೊಂಡಿದ್ದ‌ ಹಣವನ್ನು ತೀರಿಸಲು ಇಂದು ಮೈಸೂರಿಗೆ ಬಂದಿರುವುದಾಗಿ ತಿಳಿಸಿದ್ದಾಳೆ. ಸದ್ಯ ಈ‌ ಹಣವನ್ನು ಕದ್ದಿರುವ ಬಗ್ಗೆ‌ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

About Author

Leave a Reply

Your email address will not be published. Required fields are marked *