ಸೆ.13 ಮೋದಿ ಹುಟ್ಟುಹಬ್ಬ ಹಿನ್ನಲೆ. ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವ ಆಚರಣೆ.!
1 min read
ಮೈಸೂರು : ಸೆ.13 ಮೋದಿ ಹುಟ್ಟುಹಬ್ಬ ಹಿನ್ನಲೆ ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವ ಆಚರಣೆ ಮಾಡಲಾಗುವುದು ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಾಮದಾಸ್, ‘ಮೋದಿ ಅಟ್ 71, ಆಜಾದ್ ಭಾರತ್ ಅಟ್ 75 – ಸ್ವರ್ಣ ಕೆ.ಆರ್’ ಘೋಷಣೆಯಲ್ಲಿ 20 ದಿನಗಳ ಕಾರ್ಯಕ್ರಮವಿದ್ದು, ಸಿಎಂ ಹಾಗೂ ಮಾಜಿ ಸಿಎಂ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಸೆ.17ಕ್ಕೆ ಮೋದಿ ಯುಗ್ ಉತ್ಸವಗೆ ಮಾಜಿ ಸಿಎಂ ಯಡಿಯೂರಪ್ಪರಿಂದ ಚಾಲನೆ ನೀಡಲಿದ್ದು, ಅ.6ಕ್ಕೆ ಸಮಾರೋಪ ಸಮಾರಂಭಕ್ಕೆ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ ಎಂದ್ರು.

ಇನ್ನು ಪ್ರಧಾನಿ ಮೋದಿ ಅವರ ಸಾಧನೆ ಬಗ್ಗೆ ವಸ್ತು ಪ್ರದರ್ಶನ ಮಾಡುತ್ತಿದ್ದು, ಮೋದಿ ಅವರು ಸಿಎಂ ಹಾಗೂ ಪಿಎಂ ಆಗಿ ಮಾಡಿದ ಕೆಲಸ ಅನಾವರಣ ಆಗಲಿದೆ. 20 ದಿನದಲ್ಲಿ ಪ್ರತಿದಿನ ಸಚಿವರು ಸೇರಿ ಕೇಂದ್ರದ ಸಚಿವರು ಭಾಗಿಯಾಗುತ್ತಿದ್ದು, ನಮ್ಮ ಯೋಜನೆಯನ್ನ ಜನರಿಗೆ ತಲುಪಿಸುವ ಗುರಿ ಹೊಂದಿದ್ದೇವೆ. ಇಡೀ ದೇಶದಲ್ಲಿ ಕೆ.ಆರ್ ಕ್ಷೇತ್ರ ಮೊದಲನೇ ಸ್ಥಾನದಲ್ಲಿ ಇರಬೇಕಾಗಿದ್ದು ಇದಕ್ಕಾಗಿ ಹಲವು ಯೋಜನೆಯನ್ನ ಮಾಡಿದ್ದೇವೆ ಎಂದ್ರು. ಇನ್ನು ಬೋರ್ವೆಲ್ ಮುಕ್ತ ನಗರ, ಸ್ವಂತ ಸೂರು, ಸುರಕ್ಷಿತ ರಸ್ತೆ, ಕೇಂದ್ರ ಹಾಗೂ ರಾಜ್ಯದ ಯೋಜನೆಗಳು ಜನರಿಗೆ ತಲುಪಿಸುವುದು ಸೇರಿ ಹಲವು ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಎಲ್ಲ ಕಾರ್ಯಕ್ರಮಕ್ಕು ಸೆ.17ಕ್ಕೆ ಚಾಲನೆ ನೀಡುತ್ತಿದ್ದು ಹಂತ ಹಂತವಾಗಿ ಎಲ್ಲವು ಕಾರ್ಯರೂಪಕ್ಕೆ ಬರಲಿವೆ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮಾಹಿತಿ ನೀಡಿದ್ರು.
