‘ವೃಕ್ಷಮಾತೆ’ ಸಾಲು ಮರದ ತಿಮ್ಮಕ್ಕನಿಗೆ ಒಲಿಯುತ್ತಾ ದಸರಾ ಉದ್ಘಾಟನೆ ಭಾಗ್ಯ!?

1 min read
  • ಮೈಸೂರು : ನಾಡಹಬ್ಬ ದಸರಾ ಉದ್ಘಾಟನೆಗೆ 28 ದಿನ ಮಾತ್ರ ಬಾಕಿ ಇದ್ದು, ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿ ಇದಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಸಾಂಪ್ರದಾಯಿಕ ದಸರಾ ಚಟುವಟಿಕೆ ಆರಂಭವಾಗಿದ್ದು ಗಜಪಡೆಯ ತಂಡವು ಫೈನಲ್ ಆಗಿದೆ. ಇತ್ತ 8 ಆನೆಗಳು ದಸರಾದಲ್ಲಿ ಭಾಗಿಯಾಗಲು ಸಿದ್ದವಾಗಿದ್ದು ಗಜಪಯಣಕ್ಕೆ ದಿನಾಂಕ ಸಮಯ ಕೂಡ ನಿಗಧಿಯಾಗಿದೆ. ಆದ್ರೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟಿಸುವವರು ಯಾರು ಎಂಬುದೇ ಇನ್ನೂ ನಿರ್ಧಾರ ಆಗಿಲ್ಲ.
  • ಕಳೆದ ಬಾರಿ ನಾಡಹಬ್ಬ ಉದ್ಘಾಟನೆಯನ್ನ ಕೊರೋನಾ ವಾರಿಯರ್ಸ್‌ ಉದ್ಘಾಟನೆ ಮಾಡಿದ್ದರು. ಕರೋನಾದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿ ಜನರ ಆರೋಗ್ಯಕ್ಕಾಗಿ ಹಾಗೂ ಜನರಿಗಾಗಿ ದುಡಿದವರನ್ನ ಕಳೆದ ಬಾರಿಯ ದಸರಾದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಬಾರಿ ಸಿಎಂ ಬೊಮ್ಮಾಯಿ ಅವರಿಗೆ ದಸರಾ ಉದ್ಘಾಟಕರ ಆಯ್ಕೆ ಬಿಟ್ಟಿದ್ದು ಯಾರಿಗೆ ದಸರಾ ಉದ್ಘಾಟನೆ ಭಾಗ್ಯ ಸಿಗಲಿದೆ ಎಂಬ ಕಾತುರ ಇದೆ.

ಯಾರಿಗೆ ಸಿಗಲಿದೆ ಉದ್ಘಾಟನೆಯ ಭಾಗ್ಯ

ಈ ಬಾರಿ ನಾಡಹಬ್ಬ ದಸರಾ ಯಾರಿಂದ ಉದ್ಘಾಟನೆ ಆಗಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಅದರಲ್ಲು ಸಾರ್ವಜನಿಕರಲ್ಲಿ ಈ ಕುತೂಹಲ ಸಾಮಾನ್ಯವಾಗಿಯೇ ಇದ್ದು ಅಕ್ಟೋಬರ್ 7 ಕ್ಕೆ ದಸರಾ ಉದ್ಘಾಟನೆಯಾಗಲಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯು ಕೊರೋನಾ ವಾರಿಯರ್ಸ್‌ ಅಥವಾ ಸಮಾಜ ಸೇವೆ ವಿಭಾಗದಿಂದ ಉದ್ಘಾಟನೆ ಮಾಡಿಸುವ ಕುತೂಹಲ ಇದೆ. ಆದರೆ ಬಲವಾಗಿ ಕೇಳಿ ಬರುತ್ತಿರುವ ಹೆಸರು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಹೆಸರು.

  • ಹೌದು, ಹಸಿರು ಮಾತೆ ಸಾಲುಮರದ ತಿಮ್ಮಕ್ಕನಿಗೆ‌ ಈ ಬಾರಿಯ ದಸರಾ ಉದ್ಘಾಟನೆಯ ಗೌರವ ಸಿಗಲಿದೆಯಾ ಎಂಬ ಚರ್ಚೆಗಳು ಆರಂಭವಾಗಿದೆ. ಕಾರಣ ಹಸಿರಿಗಾಗಿ ಬದುಕಿರುವ ಸಾಲಮರದ ತಿಮ್ಮಕ್ಕನಿಗೆ ಈ ಬಾರಿ ದಸರಾ ಉದ್ಘಾಟನೆ ಅವಕಾಶ ಸಿಗಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಹಸಿರು ಉಳಿಸಿ ಬೆಳೆಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಸಾಲಮರದ ತಿಮ್ಮಕ್ಕನಿಗೆ ದಸರಾ ಉದ್ಘಾಟನೆಯ ಗೌರವ ನೀಡಿದರೆ ದಸರಾಗೆ ಕಳಸಪ್ರಾಯವಾಗಲಿದೆ. ತಿಮ್ಮಕ್ಕ ದಸರಾ ಉದ್ಘಾಟಿಸಿದರೆ ಕಳಸಪ್ರಾಯ ಎಂಬುದು ನಾಡಿನ ಜನರ ಅಭಿಪ್ರಾಯ ಎಂಬುದು ಕೂಡ ಚರ್ಚೆ ಆಗುತ್ತಿದೆ ಎನ್ನಲಾಗಿದೆ‌.

ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗಲಿದೆಯಾ ಅವಕಾಶ.!?

ಹೀಗೂ ಕೂಡ ಮತ್ತೊಂದು ಚರ್ಚೆ ಆಗುತ್ತಿರೋದು ಸ್ವಾತಂತ್ರ್ಯದಲ್ಲಿ ದುಡಿದ ಹಾಗೂ ಭಾಗಿಯಾದ ಹಲವರು ಇದ್ದಾರೆ. ಅವರಿಗೆ ದಸರೆಯ ಉದ್ಘಾಟನೆಯ ಭಾಗ್ಯ ಸಿಗಲಿದೆಯಾ ಎಂಬುದು. ಇದಕ್ಕೆ ಕಾರಣವೆಂದರೆ, ಈ ಬಾರಿ 75ನೇ ಸ್ವಾತಂತ್ರ್ರೋತ್ಸವದ ಅಮೃತ ಮಹೋತ್ಸವ ಆಚರಣೆ ನಡೆಯುತ್ತಿದೆ. ಆದ ಕಾರಣ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಬಾರಿ ದಸರಾ ಉದ್ಘಾಟನೆಗೆ ಮನ್ನಣೆ ನೀಡಬಹುದು ಎನ್ನಲಾಗ್ತಿದೆ. ಕಳೆದ ವರ್ಷ ಕೋವಿಡ್ ವಾರಿಯರ್ಸ್‌ಗೆ ದಸರಾ ಉದ್ಘಾಟನೆಯ ಗೌರವ ಧಕ್ಕಿತ್ತು. ಆದರೆ ಈ ಬಾರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಉದ್ಘಾಟನೆ ಭಾಗ್ಯ ನೀಡುತ್ತಾ ಸರ್ಕಾರ ಎಂಬ ಮಾತುಗಳು ಕೇಳಿ ಬಂದಿದೆ.

ಸೆ. 13 ರಂದು ಗಜಪಡೆ ಸ್ವಾಗತ ದಿನವೇ ನಿಗಧಿಯಾಗುತ್ತಾ ಉದ್ಘಾಟಕರ ಹೆಸರು?

ಗಜಪಡೆಯನ್ನ ಸೆ.13ಕ್ಕೆ ಸ್ವಾಗತ ಕೋರುವ ಕಾರ್ಯಕ್ರಮ ಇದೆ. ಈ ದಿನದ ಸಮಾರಂಭದಲ್ಲೇ ಉದ್ಘಾಕರ ಹೆಸರು ಘೋಷಣೆಯಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೂರನೇ ದಸರಾ ಇದಾಗಿದ್ದು ಈ ಹಿಂದಿನ ಎರಡು ದಸರಾ ಉದ್ಘಾಟಕರ ಹೆಸರನ್ನ ಸಂಸದ ಪ್ರತಾಪ್ ಸಿಂಹ ಅವರೇ ದಸರಾ ಸಿದ್ದತೆಗು ಮುನ್ನವೇ ಪ್ರಸ್ತಾಪಿಸಿ ಅವರಿಂದಲೇ ಉದ್ಘಾಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಸಂಸದ ಪ್ರತಾಪ್ ಸಿಂಹ ಮೌನಕ್ಕೆ ಶರಣಾಗಿದ್ದು ಬಿಜೆಪಿಗೆ ಸಂಘ ಪರಿವಾರದ ಮೇಲೆ ಒಲವಿದ್ದು ಅವರಲ್ಲಿ ಯಾರಿಗಾದರು ದಸರಾ ಉದ್ಘಾಟನೆ ಭಾಗ್ಯ ಸಿಗಲಿದೆಯಾ ಬ ಚರ್ಚೆ ಆರಂಭವಾಗಿದೆ.

ಜನರ ಅಭಿಪ್ರಾಯವನ್ನ ಸರ್ಕಾರ ಗೌರವಿಸಬೇಕಿದೆ. ಅದರಲ್ಲಿ ಹೋರಾಟಗಾರರು ಅಥವಾ ಸಾಲು ಮರದ ತಿಮ್ಮಕ್ಕನ ಹೆಸರು ಮಾತ್ರ ಬಹಳ ಬಲವಾಗಿ ಕೇಳಿ ಬಂದಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

About Author

Leave a Reply

Your email address will not be published. Required fields are marked *