ಮೈಸೂರು ಗ್ಯಾಂಗ್ ರೇಪ್ ಪ್ರಕರಣ- 7ನೇ ಆರೋಪಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ ಪೊಲೀಸರು!
1 min readಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಇದೀಗಾ 7ನೇ ಹಾಗೂ ಪ್ರಮುಖ ಆರೋಪಿ ಮತ್ತೊಂದು ಸತ್ಯ ಬಾಯ್ಬಿಟ್ಟಿದ್ದಾನೆ. ಮೈಸೂರು ಪೊಲೀಸರು 7ನೇ ಆರೋಪಿಗಾಗಿ ಭರ್ಜರಿ ಕಾರ್ಯಚರಣೆ ನಡೆಸಿ ಬಂಧಿಸಿ ಕರೆತಂದಿದ್ರು. ಆದರೆ ತನಿಖೆ ವೇಳೆ ಈತನಿಂದ ಮಹತ್ವದ ಮಾಹಿತಿ ಸಿಕ್ಕಿದ್ದು, ಈತನನ್ನ 10 ದಿನ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
7ನೇ ಆರೋಪಿಯಾದ ಈತ ಪೊಲೀಸರ ಬಳಿ ಮಹತ್ವದ ಮಾಹಿತಿ ಹೇಳಿದ್ದು, ಘಟನೆಯ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡಿದ್ದಾನೆ. ಎರಡು ದಿನದ ಹಿಂದೆ ಈತನನ್ನ ತಮಿಳುನಾಡಿನ ತಿರ್ಪೂರಿನಲ್ಲಿ ಬಂಧಿಸಿದ್ದ ಪೊಲೀಸರು ಈತನ ಬಳಿ ಮಾಹಿತಿ ಕಲೆ ಹಾಕುವ ವೇಳೆ 7ನೇ ಆರೋಪಿ, ಅಪ್ರಾಪ್ತ ಸೇರಿ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರಂತೆ. ಅಲ್ಲದೆ ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಂಜೆ ಎಣ್ಣೆ ಪಾರ್ಟಿ ಮಾಡಿ ನಂತರ ನಿರ್ಜನ ಪ್ರದೇಶದಲ್ಲಿದ್ದವರನ್ನು ದೋಚುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಆದರೆ ಘಟನೆ ದಿನ ಯುವಕ ಯುವತಿ ಬಳಿ ಹಣ ದೋಚಲು ಹೋಗಿದ್ದ ಈ ತಂಡ ಅವರ ಬಳಿ ಹಣ ಇರಲಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಿ ಕೃತ್ಯವೆಸಗಿ ಪರಾರಿಯಾಗಿದ್ದೇವು ಎಂದು ಪೊಲೀಸರ ಬಳಿ ಕೃತ್ಯದ ವಿವರ ಬಾಯಿಬಿಟ್ಟಿದ್ದಾನೆ.
ಸದ್ಯ ಆರೋಪಿಗಳನ್ನ ತೀವ್ರತರವಾದ ವಿಚಾರಣೆ ನಡೆಯುತ್ತಿದ್ದು ಮುಂದೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.