ಕೋವಿಡ್ ಪಾಸಿಟಿವ್ ಬಂದು ಗುಣವಾದ ನಂತರ ವಿಶ್ರಾಂತಿ ವ್ಯವಸ್ಥೆಗೆ JSS ಸಂಸ್ಥೆ ಕಟ್ಟಡ
1 min readಮೈಸೂರು: ಕೋವಿಡ್ ಪಾಸಿಟಿವ್ ಬಂದು ಗುಣವಾದ ನಂತರ ವಿಶ್ರಾಂತಿ ವ್ಯವಸ್ಥೆಗೆ JSS ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳನ್ನು ಜಿಲ್ಲಾಢಳಿತಕ್ಕೆ ನೀಡಲು ಸುತ್ತೂರು ಮಠ ನಿರ್ಧಾರ ಮಾಡಿದೆ ಅಂತ ಸುತ್ತೂರು ಶ್ರೀಗಳು ಹೇಳಿದ್ದಾರೆ.
ಒಟ್ಟು 6 ಸಾವಿರ ಜನರಿಗೆ ವ್ಯವಸ್ಥೆ ಮಾಡಬಹುದು. ಇದಕ್ಕೆ ಊಟ ವಸತಿ ಎಲ್ಲಾ ವ್ಯವಸ್ಥೆ ಮಠದಿಂದಲೆ ಮಾಡಲಾಗುತ್ತೆ. ಅದೇ ರೀತಿ ಕೊರೊನಾಕ್ಕೆ ಪೋಷಕರು ಮೃತಪಟ್ಟ ಅನಾಥವಾದ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬದ ಮಕ್ಕಳಿಗೆ ನೆರವು ನಿಡಲಾಗುವುದು.
1ರಿಂದ 10ನೇ ತರಗತಿವರೆಗು ಉಚಿತ ಶಿಕ್ಷಣ, ವಸತಿ ವ್ಯವಸ್ಥೆಯನ್ನ ಮಠ ಕಲ್ಪಿಸಲಿದೆ. ರಾಜ್ಯದ ಹಾಗೂ ಹೊರ ರಾಜ್ಯ ಮಕ್ಕಳು ಈ ಸೌಲಭ್ಯ ಪಡೆಯಬಹುದು. ಸುತ್ತೂರಿನ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿ ಸುತ್ತೂರು ಶ್ರೀಗಳು ತಿಳಿಸಿದ್ದಾರೆ.