ಮೈಸೂರು ನಗರದಲ್ಲಿ ಕರೋನಾ ನಿಯಂತ್ರಣದಲ್ಲಿದೆ: ಗ್ರಾಮಾಂತರ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ
1 min readಮೈಸೂರು: ಮೈಸೂರು ನಗರದಲ್ಲಿ ಕರೋನಾ ನಿಯಂತ್ರಣದಲ್ಲಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಕರೋನಾ ನಿಯಂತ್ರಣದಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಡಿಹೆಚ್‌ಓ ಜಿ.ಪಂ ಸಿಇಓ ಈ ಮೂವರು ಅಧಿಕಾರಿಗಳು ಗ್ರಾಮಕ್ಕೆ ಹೋಗಿ ಕೆಲಸ ಮಾಡಬೇಕು. ಪ್ರತಿ ದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅಂಕಿ ಸಂಖ್ಯೆ ಪಡೆದರೆ ಪ್ರಯೋಜನ ಇಲ್ಲ.
ಜನಪ್ರತಿನಿಧಿಗಳಾದ ನಾವು ನಮ್ಮ ವ್ಯಾಪ್ತಿಯ ಕೆಲಸಗಳನ್ನ ಮಾಡಿದ್ದೇವೆ. ಕೆಲವು ಕೆಲಸವನ್ನ ಅಧಿಕಾರಿಗಳೇ ಮಾಡಬೇಕು. ಹೀಗಾಗಿ ತುರ್ತಾಗಿ ಮೈಸೂರು ಜಿಲ್ಲಾಡಳಿತ ಹಳ್ಳಿಗಳ ಕಡೆ ಗಮನಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು, ಹಳ್ಳಿಗಳಲ್ಲಿ ಸಭೆ ಮಾಡುತ್ತಿದ್ದಾರೆ. ಈ ಸಭೆಗಳಿಗಿಂತ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಡುವುದು ಬಹಳ ಮುಖ್ಯ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.