ಮೈಸೂರಿನಲ್ಲಿಂದು 404 ಕೊರೊನಾ ಪಾಸಿಟಿವ್ ಕೇಸ್ ಪತ್ತೆ: 22 ಮಂದಿ ಸಾವು
1 min read![](https://nannurumysuru.com/wp-content/uploads/2021/05/Mysuru-4.jpg)
ಮೈಸೂರು: ಮೈಸೂರಿನಲ್ಲಿಂದು 404 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,64,018 ಕ್ಕೇರಿಕೆಯಾಗಿದೆ.
ಇನ್ನು ಇಂದು 1,290 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,56,675 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,257ಕ್ಕೆ ಇಳಿಕೆಯಾಗಿದೆ.
![](https://nannurumysuru.com/wp-content/uploads/2023/09/Nayana-Kumars.jpg)
ಅಲ್ಲದೆ ಮೈಸೂರಿನಲ್ಲಿಂದು 22 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 2,086 ಕೊರೊನಾ ಸೋಂಕಿತರು ಮೃತರಾಗಿದ್ದಾರೆ.
![](https://nannurumysuru.com/wp-content/uploads/2021/06/E4pnOXoVEAo9yAk-793x1024.jpg)