ಜೆಕೆ ಮೈದಾನದಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರು, ಅವರ ಕುಟುಂಬಕ್ಕೆ ಲಸಿಕೆ ನೀಡಲಾಗಿದೆ
1 min read
ಮೈಸೂರು: ಐಎಂಎ ಮತ್ತು ಎಂಎಎ ವತಿಯಿಂದ ಮೈಸೂರಿನ ಆರೋಗ್ಯ ಕಾರ್ಯಕರ್ತರು ಮತ್ತು ಅವರ ಕುಟುಂಬಕ್ಕೆ ಸೋಮವಾರದಂದು ಜೆಕೆ ಮೈದಾನದಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 820 ಜನರಿಗೆ ಲಸಿಕೆ ನೀಡಲಾಯಿತು ಎಂದು ಕಾರ್ಯದರ್ಶಿ ಪಿ.ಮಾಲೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಆನಂದ್ ರವಿ, ಡಾ.ಪ್ರಸನ್ನ ಶಂಜರ್, ಡಾ. ಚಂದ್ರಬನ್ ಸಿಂಗ್, ಐಎಂಎ, ಎಂಎಎ ಸದಸ್ಯರು ಎಂ.ಎಂ.ಸಿ.ಆರ್ ಪಿಜಿ ವಿದ್ಯಾರ್ಥಿಗಳು, ಇಂಟರ್ನ್ಸ್, ನರ್ಸಿಂಗ್ ಸಿಬ್ಬಂದಿ, ಮೊಬೈಲ್ ತಂಡ, ಸ್ವಯಂಸೇವಕರು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು.
